ಕನ್ನಡ ಭಾಷೆ ಮತ್ತು ವ್ಯಾಕರಣಗಳ ಒಂದು ಸಮೀಕ್ಷೆ

Author : ಕೆ. ಕುಶಾಲಪ್ಪಗೌಡ

Pages 496

₹ 350.00




Year of Publication: 2018
Published by: ಪ್ರಿಯದರ್ಶಿನಿ ಪ್ರಕಾಶನ
Address: ಮೈಸೂರು

Synopsys

ಡಾ. ಕೆ. ಕುಶಾಲಪ್ಪ ಗೌಡ ಅವರ ಕೃತಿ-ಕನ್ನಡ ಭಾಷೆ ಮತ್ತು ವ್ಯಾಕರಣಗಳ ಒಂದು ಸಮೀಕ್ಷೆ. ಅತ್ಯಂತ ಪುರಾತನವಾದ ಕನ್ನಡ ಭಾಷೆಯು ಬೆಳೆದು ಬಂದ ಬಗೆ ಹಾಗೂ ವ್ಯಾಕರಣ ವಿಷಯದಲ್ಲಿ ಅದು ಪರಿವರ್ತನೆಗೊಂಡ ರೀತಿಯನ್ನು ಹಾಗೂ ಅವುಗಳಲ್ಲಿಯ ವೈವಿಧ್ಯತೆಯನ್ನು, ಅಧ್ಯಯನ ಮಾಡಿದ ವಯಾಣಿಕರ ಕುರಿತು ವಿವರ ಮಾಹಿತಿಯ ಕೃತಿ ಇದು. ಕನ್ನಡ ಭಾಷಾ ಸಂಶೋಧನಾ ವಿದ್ಯಾರ್ಥಿಗಳಿಗೆ ಹಾಗೂ ಬೋಧಕರಿಗೂ ಈ ಗ್ರಂಥ ಉಪಯುಕ್ತವಾಗಿದೆ.

About the Author

ಕೆ. ಕುಶಾಲಪ್ಪಗೌಡ
(30 May 1931 - 03 May 2022)

ಕೊಡಗು ಜಿಲ್ಲೆಯ ಪೆರುಜೆಯವರಾದ ಡಾ. ಕೆ. ಕುಶಾಲಪ್ಪ ಗೌಡ ಅವರು ಇಂಗ್ಲೆಂಡಿನಲ್ಲಿ ಭಾಷಾ ವಿಜ್ಞಾನದ ಬಗ್ಗೆ ವಿಶೇಷ ಅಧ್ಯಯನ ಮಾಡಿದ್ದಾರೆ. ಭಾಷಾಶಾಸ್ತ್ರ, ವ್ಯಾಕರಣಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.  'ದಕ್ಷಿಣ ಕನ್ನಡ ಜಿಲ್ಲೆಯ ಕೈಫಿಯತ್ತುಗಳು' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಸಂದಿದೆ. ಅವರಿಗೆ ಸೋವಿಯತ್ ಲ್ಯಾಂಡ್ ಪ್ರಶಸ್ತಿ (1988) ಲಭಿಸಿದೆ. ಮದ್ರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿದ್ದ ಅವರು ನಿವೃತ್ತರಾಗಿದ್ದಾರೆ. ಲಘು ವಿನೋದ ಅವರ ಕೃತಿಗಳ ವಿಶೇಷತೆ.  ಕಡಲ ತಡಿಯ ಕನವರಿಕೆ, ನಾನು ಸತ್ತಿಲ್ಲ ಕೊಳಚೇಪುರಿ ಪುಷ್ಪಕ ಪುರಾಣ, ಈ ಹೆನ್ ಪೆಕ್ಡ್‌, ಪುಸ್ತಕಂ ವಿನಿತಾವಿತ್ತಂ, ಸತ್ಯದ ಸುಳ್ಳು, ಹೆಂಡತಿಯನ್ನು ಹೇಗೆ ಕರೆಯುವುದು, ಕಮಲ ನಿಮೀಲನ ...

READ MORE

Related Books