ಕೊಡಗು ಜಿಲ್ಲೆಯ ಪೆರುಜೆಯವರಾದ ಡಾ. ಕೆ. ಕುಶಾಲಪ್ಪ ಗೌಡ ಅವರು ಇಂಗ್ಲೆಂಡಿನಲ್ಲಿ ಭಾಷಾ ವಿಜ್ಞಾನದ ಬಗ್ಗೆ ವಿಶೇಷ ಅಧ್ಯಯನ ಮಾಡಿದ್ದಾರೆ. ಭಾಷಾಶಾಸ್ತ್ರ, ವ್ಯಾಕರಣಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
'ದಕ್ಷಿಣ ಕನ್ನಡ ಜಿಲ್ಲೆಯ ಕೈಫಿಯತ್ತುಗಳು' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಸಂದಿದೆ. ಅವರಿಗೆ ಸೋವಿಯತ್ ಲ್ಯಾಂಡ್ ಪ್ರಶಸ್ತಿ (1988) ಲಭಿಸಿದೆ. ಮದ್ರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿದ್ದ ಅವರು ನಿವೃತ್ತರಾಗಿದ್ದಾರೆ. ಲಘು ವಿನೋದ ಅವರ ಕೃತಿಗಳ ವಿಶೇಷತೆ.
ಕಡಲ ತಡಿಯ ಕನವರಿಕೆ, ನಾನು ಸತ್ತಿಲ್ಲ ಕೊಳಚೇಪುರಿ ಪುಷ್ಪಕ ಪುರಾಣ, ಈ ಹೆನ್ ಪೆಕ್ಡ್, ಪುಸ್ತಕಂ ವಿನಿತಾವಿತ್ತಂ, ಸತ್ಯದ ಸುಳ್ಳು, ಹೆಂಡತಿಯನ್ನು ಹೇಗೆ ಕರೆಯುವುದು, ಕಮಲ ನಿಮೀಲನ ಪ್ರಕಟಿತ ಕೃತಿಗಳು.