ನಾಟಕ ಸಾಹಿತ್ಯ ಮತ್ತು ರಂಗಭೂಮಿಗೆ ಸಂಬಂಧಿಸಿದ ಕೃತಿಗಳ ಸಂಖ್ಯೆ ಕಡಿಮೆ. ಅದರಲ್ಲಿಯೂ, ಹೈದರಾಬಾದ್ ಕರ್ನಾಟಕದ ರಂಗಭೂಮಿ ಕುರಿತ ಕೃತಿಗಳು ಇಲ್ಲವೇ ಇಲ್ಲ ಎನ್ನುವಂತಿದೆ. ಈ ಕೃತಿಯು ಕೊರತೆಯನ್ನು ಕೃತಿ ನೀಗಿಸುತ್ತದೆ. ಮುಂಬೈ ಕರ್ನಾಟಕ ಭಾಗದಲ್ಲಿ ನಾಟಕ ಕಂಪನಿಗಳು ಹುಟ್ಟಿಕೊಂಡ ಎರಡು ದಶಕಗಳ ನಂತರ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ರಂಗಭೂಮಿ ಚಟುವಟಿಕೆಗಳು ಹೇಗೆ ಗರಿಗೆದರಿದವು ಎಂಬುದನ್ನು ಸಂಪಾದಕಿ ವಿವರಿಸಿದ್ದಾರೆ. ಹೈದರಾಬಾದ್ ಕರ್ನಾಟಕದ ಗ್ರಾಮೀಣ ರಂಗಭೂಮಿ ನಾಟಕಗಳನ್ನು ಈ ಕೃತಿಯೂ ಒಳಗೊಂಡಿದೆ.
©2024 Book Brahma Private Limited.