ನಾಟಕ ಸಾಹಿತ್ಯ ಮತ್ತು ರಂಗಭೂಮಿ ಸಂಬಂಧಿಸಿದಂತೆ ಕೃತಿಗಳ ಸಂಖ್ಯೆ ಕಡಿಮೆ. ಅದರಲ್ಲಿಯೂ, ಹೈದರಾಬಾದ್ ಕರ್ನಾಟಕದ ರಂಗಭೂಮಿ ಕುರಿತ ಕೃತಿಗಳು ಇಲ್ಲವೇ ಇಲ್ಲ ಎನ್ನುವಂತಿದೆ. ಈ ಕೃತಿಯು ಕೊರತೆಯನ್ನು ಕೃತಿ ನೀಗಿಸುತ್ತದೆ. ಹೈದರಾಬಾದ್ ಭಾಗದ ಗ್ರಾಮೀಣ, ವೃತ್ತಿ ಹಾಗೂ ಹವ್ಯಾಸಿ ರಂಗಭೂಮಿ, ಕಂಪನಿಗಳು ಹಾಗೂ ನಾಟಕಕಾರರ ಪರಿಚಯ ಈ ಕೃತಿಯಲ್ಲಿದೆ. ಮುಂಬೈ ಕರ್ನಾಟಕ ಭಾಗದಲ್ಲಿ ನಾಟಕ ಕಂಪನಿಗಳು ಹುಟ್ಟಿಕೊಂಡ ಎರಡು ದಶಕಗಳ ನಂತರ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ರಂಗಭೂಮಿ ಚಟುವಟಿಕೆಗಳು ಹೇಗೆ ಗರಿಗೆದರಿದವು ಎಂಬುದನ್ನು ಸಂಪಾದಕಿ ವಿವರಿಸಿದ್ದಾರೆ. ಹೈದರಾಬಾದ್ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಇದ್ದ ನಾಟಕ ಕಂಪನಿಗಳನ್ನು ಕೃತಿಯಲ್ಲಿ ನೀಡಲಾಗಿದೆ.
©2024 Book Brahma Private Limited.