ಡಾ. ಲಿಂಗರಾಜ ರಾಮಾಪೂರ ಅವರು ಸಾಮಾನ್ಯ ವಿಜ್ನಾನಕ್ಕೆ ಸಂಬಂಧಿಸಿದ ಮಹತ್ವದ ಪ್ರಶ್ನೆಗಳನ್ನು ಕೇಳುವ ಮೂಲಕ ಮಕ್ಕಳ ಗಮನ ಸೆಳೆದ ಕೃತಿ-ಏನು? ಏಕೆ? ಹಿಂಗ್ಯಾಕೆ ವಿಜ್ಞಾನ ಲಹರಿ. 200ಕ್ಕೂ ಹೆಚ್ಚು ಪ್ರಶ್ನೆಗಳಿವೆ. ನಿವೃತ್ತ ಗ್ರಂತಪಾಲಕ ಬಿ.ಎಸ್. ಮಾಳವಾಡ ಅವರು ಕೃತಿಗೆ ಮುನ್ನುಡಿ ಬರೆದು ‘ ಪ್ರಶ್ನೆಗಳಿಗೆ ಲೇಖಕರು ಅಧ್ಯಯನ ಪೂರ್ವಕವಾಗಿ ಉತ್ತರಗಳನ್ನು ನೀಡಿದ್ದಾರೆ. ಇವು ಕೇವಲ ಉತ್ತರಗಳಷ್ಟೇ ಅಲ್ಲ ಮಕ್ಕಳ, ಶಿಕ್ಷಕರ ಓದನ್ನು ವಿಸ್ತರಿಸುವ ಸುಳಿವುಗಳಂತಿವೆ. ಅವರನ್ನು ಹುಡುಕಾಟಕ್ಕೆ ಹಚ್ಚುವ ಕಾರ್ಯ ಮಾಡುತ್ತವೆ. ಜೀವಜಗತ್ತಿನ ನಿಗೂಢ ಜಗತ್ತನ್ನು ಪ್ರಶ್ನೆಗಳ ಮೂಲಕ ಭೇದಿಸುತ್ತಾ ಸಾಗುವ ಅವರ ಬರಹದ ಪರಿ ನಿಜಕ್ಕೂ ಆಕರ್ಷಣೀಯ ಹಾಗೂ ಅನುಕರಣೀಯ. ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಅವರ ನಿರೂಪಣಾ ಶೈಲಿ ಮನೋಜ್ಞವಾದದ್ದು. ಶಬ್ದಗಳ ಜೋಡಣೆ ಸರಳ ಮತ್ತು ಕ್ರಿಯಾತ್ಮಕವಾದದ್ದು. ಉತ್ತರಗಳಷ್ಟೇ ಪ್ರಶ್ನೆಗಳ ಜೋಡಣೆಯೂ ಓದುಗರನ್ನು ಸೆಳೆಯುವಂತದ್ದು, ವಿಜ್ಞಾನವನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವ ಹಲವಾರು ಹಾದಿಗಳಲ್ಲಿ ಈ ಕೃತಿಯ ಕಳಕಳಿಯೂ ಒಂದು’ ಎಂದು ಪ್ರಶಂಸಿಸಿದ್ದಾರೆ. .
©2024 Book Brahma Private Limited.