`ನಗ್ ನಗ್ತಾ ವಿಜ್ಞಾನ’ – ಇದೇನು ಹೆಸರು? ವಿಚಿತ್ರವಾಗಿದೆಯಲ್ಲ ಅಂತ ಅನ್ನಿಸಬಹುದು. ಹೌದು, ಸೈನ್ಸ್ ಜೊತೆಗೆ ಅಲ್ಲಲ್ಲಿ ಸ್ಮೈಲ್ ಮೂಡಿಸುವಂಥ ವಿನೋದ ವಿಚಾರಗಳು ಇದರಲ್ಲಿವೆ. ವ್ಯಂಗ್ಯಗಳ ಮಸಾಲೆ, ನಗೆಯ ಒಗ್ಗರಣೆ, ಗಂಭೀರ ವಿಷಯಗಳತ್ತ ಒಂದಿಷ್ಟು ವಾರೆನೋಟ. ಗಹನ ಸಂಗತಿಗಳ ಜೊತೆಗೆ ಗಹಗಹಿಸಲು ತುಸು ತ್ರಾಸ.
ಕುದಿಯುವ ಎಣ್ಣೆಯಲ್ಲಿ ಪೂರಿ ಏಕೆ ಉಬ್ಬಿಕೊಳ್ಳುತ್ತದೆ? ಎಕ್ಸ್ ಕಿರಣವೇ ಏಕೆ, ಅದು ವೈ ಕಿರಣ ಏಕೆ ಅಲ್ಲ? ಚಂದ್ರ ನೀಲಿಯಾಗುವುದು ಯಾವಾಗ? ಭಾಷಣಕ್ಕೆ ನಿಂತಾಗ ಗಂಟಲು ಒಣಗುವುದು ಏಕೆ? ಗಾಯ ಮಾಯುವಾಗ ನವೆ, ತುರಿಕೆ ಏಕೆ? ಇಂದ್ರಜಾಲದಲ್ಲಿ `ಇಂದ್ರ’ ಹೇಗೆ ಬಂದ? ಹಾರ್ಸ್ ಪವರ್‍ನಲ್ಲಿ ಕುದುರೆಗೆ ಏನು ಕೆಲಸ? ಇಂಥ ಪ್ರಶ್ನೆಗಳಿಗೆ ವೈಜ್ಞಾನಿಕ ಹಿನ್ನೆಲೆ, ಚಾರಿತ್ರಿಕ ಕಾರಣಗಳನ್ನು ನೀಡಿದ ನಂತರ, ಅದೇ ಪ್ರಶ್ನೆಗೆ ತುಂಟ, ವಿನೋದ ಉತ್ತರಗಳೂ ಇಲ್ಲಿವೆ.
ಇದನ್ನು ಆರಂಭದಿಂದಲೇ ಓದಬೇಕೆಂದೇನೂ ಇಲ್ಲ. ಮಾಲ್‍ಗಳಲ್ಲಿಯ ಮಳಿಗೆಗಳ ಹಾಗೆ ನಿಮಗೆ ತೋಚಿದ ಭಾಗಕ್ಕೆ ನೀವು ನೇರ ನುಗ್ಗಬಹುದು. ಅಷ್ಟೇ ಅಲ್ಲ, ಯಾವುದೇ ಪುಟವನ್ನು ತೆರೆದು ಯಾವುದೇ ಭಾಗವನ್ನು ಓದಬಹುದು. ಹತ್ತೇ ನಿಮಿಷಗಳ ಬಿಡುವಿದ್ದರೂ, ಯಾವುದಾದರೂ ಪುಟದ ಮೇಲೆ ಕಣ್ಣು ಹಾಯಿಸಬಹುದು.
©2025 Book Brahma Private Limited.