ಲೇಖಕ ಹಾಗೂ ವ್ಯಂಗ್ಯ ಚಿತ್ರಕಲಾವಿದ ಜಿ.ವಿ. ಗಣೇಶಯ್ಯ ಅವರು ವಿಜ್ಞಾನ ಮಾಹಿತಿಗಳೊಂದಿಗೆ ಮಕ್ಕಳಿಗಾಗಿ ಬರೆದ ಕೃತಿ-ನೀವೇ ಮಾಡಿ ಬಳಸಿ ಬಿಸಿಲು ಒಲೆ. ದಿನ ನಿತ್ಯದ ಜೀವನದಲ್ಲಿ ವೈಜ್ಞಾನಿಕವಾದ ಚಟುವಟಿಕೆಗಳು ನಮಗರಿವಿಲ್ಲದಂತೆಯೇ ನಡೆಯುತ್ತಿರುತ್ತವೆ. ಅವುಗಳನ್ನು ಗುರುತಿಸಿ, ಇಂತಹ ನಿರ್ದಿಷ್ಟ ವಿದ್ಯಮಾನದಲ್ಲಿ ವಿಜ್ಞಾನದ ಯಾವ ತತ್ವ ಅಡಗಿದೆ. ಯಾವ ಸಿದ್ಧಾಂತವು ಏಕೆ, ಹೀಗೆ ಕೆಲಸ ಮಾಡುತ್ತದೆ ಎಂಬಿತ್ಯಾದಿ ಸಂಗತಿಗಳನ್ನು ಮಕ್ಕಳಿಗೆ ತಿಳಿಯುವಂತೆ ಹೇಳುವುದು ಅಗತ್ಯ. ಅವರಲ್ಲಿ ವೈಜ್ಞಾನಿಕ ಮನೋಭಾವ ಬೆಳಸಿದಂತೆಯೂ ಆಗುತ್ತದೆ. ಈ ಹಿನ್ನೆಲೆಯಲ್ಲಿ, ಲೇಖಕರು ಬಿಸಿಲು ಒಲೆ ಕುರಿತು ಅದರಲ್ಲಿಯ ವೈಜ್ಞಾನಿಕತೆಯನ್ನು ತಿಳಿಸಲು ಯತ್ನಿಸಿದ್ದಾರೆ.
©2025 Book Brahma Private Limited.