ಮಕ್ಕಳಿಗಾಗಿ ವಿಜ್ಞಾನ ಎಂಬ ಉದ್ದೇಶದೊಂದಿಗೆ ಪ್ರೊ. ಸಿ.ಡಿ. ಪಾಟೀಲರು ‘ಪರಿಸರಕ್ಕೊಂದು ಕಿಂಡಿ’ ಎಂಬ ಕೃತಿಯನ್ನು ರಚಿಸಿದ್ದು, ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಕೆರಳಿಸುವ ಕುತೂಹಲಕಾರಿ ಪ್ರಯೋಗಗಳು ಹಾಗೂ ಚಟುವಟಿಕೆಗಳನ್ನು ಒಳಗೊಂಡಿದೆ. ಮಕ್ಕಳಿಗೆ ಮನರಂಜನೆಯಾಗಿಯೂ, ವಿಜ್ಞಾನದ ಪ್ರಯೋಗವಾಗಿಯೂ ಇರುವಂತೆ ಚಟುವಟಿಕೆಗಳನ್ನು ಆಯ್ಕೆ ಮಾಡಿಕೊಂಡು ವಿವರಿಸಲಾಗಿದೆ. ವಿಜ್ಞಾನದ ಸಣ್ಣ ಸಣ್ಣ ಪ್ರಯೋಗಗಳ ಮೂಲಕ ಅಗಾಧವಾದ ವೈಜ್ಞಾನಿಕ ಜಗತ್ತನ್ನು ಪರಿಚಯಿಸುವುದು ಈ ಕೃತಿಯ ಉದ್ದೇಶ.
©2025 Book Brahma Private Limited.