`ಸೃಷ್ಟಿವಾದಿಗಳ ಮುಷ್ಟಿಯಲ್ಲಿ ಡಾರ್ವಿನ್’ ಹನ್ನೊಂದು ವಿಜ್ಞಾನ ಲೇಖನಗಳ ಸಂಗ್ರಹ. ಇದರಲ್ಲಿ ಸಾಲಿಗ್ರಾಮದ ಕಥೆ ಇದೆ, ಭೂಮಿ ಜೀವಿಯನ್ನು ಕೊಡುವ ಮುನ್ನ ಇದ್ದ ಸ್ಥಿತಿಯ ಬಗ್ಗೆ ಅಪರೂಪದ ಒಳನೋಟವಿದೆ, ಸರಸ್ವತೀ ನದಿ ಕುರಿತು ಗುಪ್ತಗಾಮಿನಿಯೇ ಎಂಬ ಪ್ರಶ್ನೆಗೆ ಸೂಕ್ತ ಉತ್ತರವಿದೆ. ಕೋಳಿಫಾರಂನಲ್ಲಿ ಡೈನೋಸಾರ್, ಭೂಕಂಪನ, ಅಂತರಿಕ್ಷ ನಿಲ್ದಾಣ ಮುಂತಾದ ಲೇಖನಗಳು ಆಯಾ ಕ್ಷೇತ್ರದ ಬೆಳವಣಿಗೆಯನ್ನು ನಿಚ್ಚಳವಾಗಿ ಸೆರೆಹಿಡಿದಿವೆ.
ಕೃತಿಯ ಶೀರ್ಷಿಕೆಯ ಲೇಖನದಲ್ಲಿ ಡಾರ್ವಿನ್‍ನ ಜೀವಿವಿಕಾಸ ಕುರಿತ ಚಿಂತನೆಗಳಿವೆ. ಇತ್ತೀಚೆಗೆ, ವಿಶೇಷವಾಗಿ ಅಮೆರಿಕದಲ್ಲಿ ಹೇಗೆ ಆ ಸಿದ್ಧಾಂತ ವಿರೂಪಗೊಂಡು ಅಂತಿಮವಾಗಿ ಬೈಬಲ್‍ನಲ್ಲಿ ಹೇಳಿರುವ ಸೃಷ್ಟಿ ಕುರಿತ ವಿಚಾರಗಳೇ ಇಂದಿಗೂ ಪ್ರಸ್ತುತ ಎಂಬ ಒಂದು ವರ್ಗದ ಜನರ ನಂಬಿಕೆಗಳು ಹೇಗೆ ವಿಜ್ಞಾನವನ್ನು ತುಳಿಯುತ್ತಿದೆ ಎಂಬುದರ ಎಲ್ಲ ಮಗ್ಗುಲನ್ನೂ ಸೆರೆ ಹಿಡಿಯಲಾಗಿದೆ. ಆ ಮೂಲಕ ಡಾರ್ವಿನ್ ನ ದೀರ್ಘ ಅಧ್ಯಯನಕ್ಕೆ ಎಂದೂ ವೈಜ್ಞಾನಿಕ ಮೌಲ್ಯವಿದೆ ಎಂದು ತೋರಿಸಲಾಗಿದೆ.
ಹಿಂದೂಗಳು ಸಾಲಿಗ್ರಾಮವನ್ನು ದೇವರ ಸ್ಥಾನದಲ್ಲಿಟ್ಟು ಪೂಜೆ ಮಾಡುತ್ತಾರೆ. ಇವು ಅಮೋನೈಟ್ ಎಂಬ ಜೀವಿಗಳ ಪಳೆಯುಳಿಕೆಗಳು ಎಂದು ವಿಜ್ಞಾನ ಸಾರುತ್ತದೆ. ನೇಪಾಳದ ಗಂಡಕಿ ನದಿ ಅಮೋನೈಟ್ ಇರುವ ಶಿಲೆಗಳ ಮೇಲೆ ಹರಿದು ಅವುಗಳನ್ನು ಬಿಡುಗಡೆ ಮಾಡಿ ಒಯ್ಯುತ್ತದೆ. ಸಾಲಿಗ್ರಾಮಗಳ ಎಲ್ಲ ವಿವರಗಳೂ ಓದುಗರಲ್ಲಿ ವಿಸ್ಮಯ ಉಂಟುಮಾಡುತ್ತದೆ.
©2025 Book Brahma Private Limited.