ತೇಜಸ್ವಿಯವರ ವಿಸ್ಮಯ ಭಾಗ 1 (1993) ಭಾಗದಲ್ಲಿ 'ಬ್ರಹ್ಮಾಂಡದ ಹಿನ್ನೆಲೆಯಲ್ಲಿ ಪರಿಸರ', 'ಜೀವಸ್ಟರದ ಅನಂತ ವೈವಿಧ್ಯಗಳು', 'ಸೌರಶಕ್ತಿಯ ವಿಶ್ವರೂಪ' ಎಂಬ ಮೂರು ಉಪ ವಿಭಾಗಗಳಿವೆ. ಬ್ರಹ್ಮಾಂಡದ ಹುಟ್ಟು ಮತ್ತು ಸಾವು, ಭೂಮಿ ವಯಸ್ಸು, ಸಸ್ಯ ಮತ್ತು ಪ್ರಾಣಿಗಳ ಉದ್ಭವ, ಮರುಭೂಮಿಗಳು, ಬೆಂಕಿ ಮತ್ತು ಚಳಿಯ ನಡುವೆ, ತಂಡಾ ಪ್ರದೇಶಗಳು, ಮಹಾನದಿ ಅಮೇಜಾನ್, ಕೋನಿಫರಸ್ ಕಾಡುಗಳು, ಬಿಸಿಲು, ಪರಿಸರ ಪ್ರತಿರೋಧ, ಪರಿಸರವು ನಿರಂತರ ಹೊಂದಾಣಿಕೆಯೇ? ಎಂದೆಲ್ಲಾ ಚರ್ಚಿಸಿ ವಿಶ್ಲೇಷಿಸುವುದರ ಮೂಲಕ ಪರಿಸರ ವಿಜ್ಞಾನದ ಮೂಲ ತತ್ತ್ವಗಳನ್ನು ಹಂತ ಹಂತವಾಗಿ ಅರಿವಿಗೆ ತರುತ್ತದೆ ಕೃತಿ. ತೇಜಸ್ವಿಯವರು ಪ್ರದೀಪ ಕೆಂಜಿಗೆಯವರೊಂದಿಗೆ ಸೇರಿ ರಚಿಸಿದ್ದಾರೆ.
©2025 Book Brahma Private Limited.