ಮಿಲನಿಯಮ್ ಸರಣಿಯು ಸಹಸ್ರಾರು ವರ್ಷಗಳ ಹಲವು ವಿದ್ಯಮಾನಗಳನ್ನು ಕುರಿತ ಪುಸ್ತಕ ಮಾಲೆ. ಮಿಲನಿಯಮ್ ಸರಣಿಯ ಐದನೆಯ ಕೃತಿ ’ನೆರೆಹೊರೆಯ ಗೆಳೆಯರು’. ವಿಶ್ವದ ಅನೇಕ ದ್ವೀಪಗಳಲ್ಲಿ ಬಹುತೇಕ ಪೆಸಿಫಿಕ್ ಸಾಗರದ ದ್ವೀಪಗಳಲ್ಲಿ ವಾಸಿಸುವ ವಿಶಿಷ್ಟ ಏಡಿ, ಆಮೆ, ಕಪ್ಪೆ, ಇರುವೆ, ಅಳಿಲು, ಇಲಿಗಳಂತಹ ಸಂಕುಲದ ಬಗ್ಗೆ ಪರಿಚಯವಿದೆ. ಇಲ್ಲಿಯ ನಿರೂಪಣೆ ರೋಚಕವಾಗಿದೆ. ಪ್ರಖ್ಯಾತ ಪ್ರಾಣಿ ತಜ್ಞ ಅನ್ವೇಷಕ, ಲೇಖಕ ಜೆರಾಲ್ಡ್ ಡ್ಯುರೇಲ್ ಆಫ್ರಿಕಾದಲ್ಲಿ ಹಾರುವ ಇಲಿಗಳನ್ನು ಹಿಡಿಯಲು ಹೋದ ಅವನ ಕಥನದ “ಬಫೆ ಆಫ್ ಬಿಗಲೇಸ್” ಕೃತಿಯ 'ದಿ ಫಾರೆಸ್ಟ್ ಆಫ್ ಫೈಯಿಂಗ್ ಮೈಸ್' ಅಧ್ಯಾಯದ ಭಾವಾನುವಾದವೂ ಇದೆ.
©2024 Book Brahma Private Limited.