ನವಕರ್ನಾಟಕ ಪ್ರಕಾಶನದ ಪುಟ್ಟ ಕಿಟ್ಟ ವಿಜ್ಞಾನ ಸಂವಾದ ಸರಣಿ ಮಾಲೆಯಡಿ ಲೇಖಕ ಎ.ಓ. ಅವಲಮೂರ್ತಿ ಅವರು ಮಕ್ಕಳಿಗಾಗಿ ಬರೆದ ಕೃತಿ-ನಮಗೆ ಭಯವಾಗುವುದೇಕೆ?. ಮಕ್ಕಳನ್ನು ಚಿಂತನಾಶೀಲರನ್ನಾಗಿಸುವ ಉದ್ದೇಶದಿಂದ ಆರಂಭಿಸಲಾದ ಈ ಸರಣಿಯಲ್ಲಿಸುತ್ತಮುತ್ತಲು ನಡೆಯುವ ಸಣ್ಣ ಸಣ್ಣ ಸಂಗತಿಗಳೆಡೆಗೆ ಮಕ್ಕಳು ಗಮನ ಹರಿಸಿ, ವೈಜ್ಞಾನಿಕ ದೃಷ್ಟಿಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುವಂತೆ ಕೃತಿಯನ್ನು ರಚಿಸಿದ್ದು ವೈಶಿಷ್ಟ್ಯ. ಇದರಿಂದ, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ದೃಢವಾಗುತ್ತದೆ ಮತ್ತು ಮಕ್ಕಳು ವಿಜ್ಞಾನವನ್ನು ಕುತೂಹಲದಿಂದ ಕಲಿಯುತ್ತಾರೆ ಹಾಗೂ ಮನರಂಜನೆಯೂ ಇಲ್ಲಿರುವುದರಿಂದ ಕಲಿಕೆ ಅರ್ಥಪೂರ್ಣವಾಗಿಸುತ್ತದೆ.
©2025 Book Brahma Private Limited.