ನೀವು ಹೀಗೆ ಯೋಚಿಸಿ: ನಿಮ್ಮ ಮಕ್ಕಳು ಎಂಥೆಂಥ ಪ್ರಶ್ನೆಗಳನ್ನು ಕೇಳಬಹುದು? ಅವುಗಳಿಗೆ ಉತ್ತರ ಕೊಡಲು ನೀವು ಸಿದ್ಧತೆ ಮಾಡಿಕೊಂಡಿದ್ದೀರಾ ಅಥವಾ `ನಿಮ್ಮ ಟೀಚರ್ ಅನ್ನು ಕೇಳು’ ಎಂದು ಹೊಣೆಯಿಂದ ತಪ್ಪಿಸಿಕೊಳ್ಳುತ್ತೀರಾ? ಅದು ಆಗದು. ಮನೆಯಲ್ಲಿ ಶಾಂತಚಿತ್ತರಾಗಿ ಮಕ್ಕಳು ಕೇಳುವ ಪ್ರಶ್ನೆಗಳಿಗೆ ನೀವು ಉತ್ತರ ಕೊಟ್ಟರೆ ಇಬ್ಬರಿಗೂ ಖುಷಿ. ಕೆಲವು ಕಟ್ಟಡಗಳ ಮೇಲೆ ಕಂಬಿಗಳನ್ನು ಏಕೆ ನೆಟ್ಟಿರುತ್ತಾರೆ? ಎಲ್ಲ ಗ್ರಹಗಳೂ ದುಂಡಗಿವೆ, ಚಪ್ಪಟೆ ಏಕಿಲ್ಲ? ಬಂದೂಕಿನಲ್ಲಿ ಗುರಿ ಇಡುವಾಗ, ಒಂದು ಕಣ್ಣು ಮುಚ್ಚಿಕೊಳ್ಳುತ್ತೇವೆ ಏಕೆ? ರೈಲ್ವೆ ಹಳಿಗಳ ನಡುವೆ ಜಲ್ಲಿ ಕಲ್ಲು ಹಾಕುವುದು ಏಕೆ? ಸೋಡಾ ಬಾಟಲಿಯನ್ನು ಕುಲುಕಿದಾಗ ಬುಸ್ ಎಂದು ನೊರೆ ಬರುವುದೇಕೆ? ದೀಪ ಆರುವ ಮುಂಚೆ ಹೆಚ್ಚು ಪ್ರಕಾಶಿಸುತ್ತದೆ ಏಕೆ? ನದಿಗಳು ಸಿಹಿ ನೀರನ್ನೇ ಹರಿಸಿದರೂ ಸಾಗರದ ನೀರೇಕೆ ಉಪ್ಪು? ಸಿಹಿ ತಿಂಡಿ ತಿಂದ ಮೇಲೆ ಕಾಫಿ ಅಥವಾ ಟೀ ಕುಡಿದರೆ ಏಕೆ ಸಪ್ಪೆ ಎನ್ನಿಸುತ್ತದೆ? ಹೆಚ್ಚಿಟ್ಟ ಬದನೆಕಾಯಿ ಬೇಗ ಕಪ್ಪಾಗುವುದು ಎಕೆ? ಇಷ್ಟೇ ಅಲ್ಲ, ಇಂಥ ಹತ್ತಾರು ಪ್ರಶ್ನೆಗಳಿಗೆ ನಿಮಗೆ ಪರಿಹಾರ `ವಿಜ್ಞಾನ: ಪ್ರಶ್ನೆ ಪರಿಹಾರ’ ಕೃತಿಯಲ್ಲಿ ಸಿಕ್ಕುತ್ತದೆ, ಇದು ಸಾಮಾನ್ಯ ವಿಜ್ಞಾನಕ್ಕೆ ಸಂಬಂಧಿಸಿದ ಕೃತಿಯಾಗಿದ್ದು ಮಕ್ಕಳು ಒಪ್ಪುವ ರೀತಿಯಲ್ಲಿ ನೀವು ಇವನ್ನೆಲ್ಲ ವಿವರಿಸಬಹದು.
©2024 Book Brahma Private Limited.