ನೀವು ಬೇಡವೆಂದರೂ ಕೆಲವು ಅತಿಥಿಗಳು ಮನೆಗೆ ನುಗ್ಗಿ ಬಂದೇ ಬರುತ್ತಾರೆ. ಹೇಗೋ ಅವರನ್ನು ಆಚೆಗೆ ಕಳಿಸಿ ನೀವು ನಿರಮ್ಮಳವಾಗಿರುವಾಗಲೇ ಮತ್ತೆ ನಿಮ್ಮ ಮನೆಯ ಯಾವುದೋ ಜಾಗದಲ್ಲಿ ಪ್ರತ್ಯಕ್ಷರಾಗುತ್ತಾರೆ. ನೀವು ಎಂದಾದರೂ ಹಲ್ಲಿಗೆ ಸ್ವಾಗತ ಕೋರಿದ್ದೀರಾ? ಜಿರಲೆಗಳನ್ನು ಎಷ್ಟು ಅಡ್ಡಾಡಿಸಿ ಕೊಂದರೂ, ಅಡುಗೆ ಮನೆಯ ಯಾವುದೋ ಡಬ್ಬದ ಹಿಂದೆ ಬಚ್ಚಿಟ್ಟುಕೊಂಡು ನಿಮ್ಮನ್ನು ಸತಾಯಿಸುತ್ತವೆ. ನೀವು ಗಹನವಾಗಿ ಯಾವುದೋ ಯೋಚನೆಯಲ್ಲಿದ್ದಾಗ, ಸದ್ದಿಲ್ಲದೆ ಬಂದು ನಿಮ್ಮ ಕಾಲನ್ನೋ, ಕುತ್ತಿಗೆಯನ್ನೋ ಕಚ್ಚಿ ರಕ್ತ ಹೀರುವ ಸೊಳ್ಳೆಗಳಿಗೆ ಯಾರು ಆಮಂತ್ರಣ ಕೊಡುತ್ತಾರೆ? ನಾಲ್ಕು ದಿನ ಮನೆ ಬಿಟ್ಟು ಹೋಗಿ ಮತ್ತೆ ಬಂದು ನೋಡಿದರೆ ಎಲ್ಲಿಂದಲೋ ಬಂದ ಇಲಿಗಳು ಎಲ್ಲವನ್ನೂ ಕಿತ್ತು ಚೆಲ್ಲಾಪಿಲ್ಲಿ ಮಾಡಿರುತ್ತವೆ. ಒಂದು ವಾರ ಬಿಟ್ಟರೂ ಸಾಕು, ನಿಮ್ಮ ಮನೆಯ ಮೂಲೆ ಮೂಲೆಗಳಲ್ಲಿ ಜೇಡ ಬಲೆಯನ್ನು ಹೆಣೆದು ಬೇಟೆಗಾಗಿ ಕಾದಿರುತ್ತದೆ. ಇನ್ನು ಇರುವೆಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಇವೆಲ್ಲ ಕರೆಯದೇ ಬರುವ ಅತಿಥಿಗಳು. ನಮ್ಮ ಜೊತೆಯಲ್ಲೇ ಬಾಳುವೆ ಮಾಡುತ್ತವೆ ಆದರೆ ಮನುಷ್ಯನಿಗೂ ಅವಕ್ಕೂ ಸಂಪರ್ಕವಿಲ್ಲ. ಅವುಗಳನ್ನು ಎಷ್ಟು ಹೊಡೆದು ಓಡಿಸಬೇಕೆಂದರೂ ಅದು ಸಾಧ್ಯವೇ ಇಲ್ಲ. ಈ ಸಣ್ಣ ಕೃತಿಯಲ್ಲಿ ಇವುಗಳನ್ನು ಕುರಿತು ಹಾಸ್ಯಮಿಶ್ರಿತ ವಿಜ್ಞಾನ ರೂಪದಲ್ಲಿ ವಿವರಿಸಲಾಗಿದೆ. ಈ ಕೃತಿಯನ್ನು ಓದಿದಾಗ ನಿಮಗೂ `ಹೌದಲ್ಲ’ ಎನ್ನಿಸುತ್ತದೆ.
©2024 Book Brahma Private Limited.