ರಾಸಾಯನಿಕ ಧಾತುಗಳು

Author : ಆರ್. ವೇಣುಗೋಪಾಲ್

Pages 116

₹ 100.00




Year of Publication: 2016
Published by: ನವಕರ್ನಾಟಕ ಪ್ರಕಾಶನ
Address: #11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ ಬಳಿ, ಕುಮಾರಪಾರ್ಕ್ ಪೂರ್ವ, ಬೆಂಗಳೂರು

Synopsys

ಪ್ರೊ. ಆರ್. ವೇಣುಗೋಪಾಲ್ ಹಾಗೂ ಪ್ರೊ. ಬಿ.ಎಸ್. ಜೈಪ್ರಕಾಶ್ ಅವರು ಸಂಯುಕ್ತವಾಗಿ ರಚಿಸಿದ ಕೃತಿ ರಾಸಾಯನಿಕ ಧಾತುಗಳು. ಮಕ್ಕಳಿಗೆ ವಿಜ್ಞಾನ ವಿಷಯದ ಕಲಿಕೆ ರೋಚಕವೂ, ಆಸಕ್ತಿದಾಯಕವೂ ಮತ್ತು ಅರ್ಥಪೂರ್ಣವೂ ಆಗಿರಬೇಕೆಂಬ ನಿಟ್ಟಿನಲ್ಲಿ ಈ ಕೃತಿ ರಚಿಸಿದೆ. ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಅಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ವಿಜ್ಞಾನಾಸಕ್ತರಿಗೆ ಈ ಕೃತಿಯು ಉಪಯುಕ್ತವಾಗಲಿದೆ. ರಾಸಾಯನಿಕ ಧಾತುಗಳು (ವಿಜ್ಞಾನ ಸರಳ ಪರಿಚಯ) ಲೋಹಗಳು, S - ಸಮುಚ್ಚಯದ ಧಾತುಗಳು, ಸಂಕ್ರಮಣ ಧಾತುಗಳು ನಂತರದ ಲೋಹಗಳು, ಸಂಕ್ರಮಣ ಲೋಹಗಳು, ಲೋಹಗಳು, ಅರೆಲೋಹಗಳು ಹೀಗೆ ವಿಷಯಗಳ ಪರಿವಿಡಿಯನ್ನು ಈ ಕೃತಿ ಒಳಗೊಂಡಿದೆ.

About the Author

ಆರ್. ವೇಣುಗೋಪಾಲ್

ಪ್ರೊಫೆಸರ್‌, ಲೇಖಕ ಆರ್. ವೇಣುಗೋಪಾಲ್ ಅವರು 1966ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ರಸಾಯನ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಬೆಂಗಳೂರಿನ ವಿಶ್ವೇಶ್ವರಪುರ ಕಾಲೇಜ್ ಆಫ್ ಸೈನ್ಸ್ನ ರಸಾಯನ ವಿಜ್ಞಾನ ವಿಭಾಗದಲ್ಲಿ ಮೂರು ದಶಕಗಳಿಗೂ ಮಿಗಿಲಾಗಿ ಸೇವೆ ಸಲ್ಲಿಸಿದರು. ಬಿ.ಎಸ್ಸಿ ಮತ್ತು ಬಿ.ಇ ವಿದ್ಯಾರ್ಥಿಗಳಿಗಾಗಿ ರಸಾಯನ ವಿಜ್ಞಾನದಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ. ನಿವೃತ್ತಿಯ ನಂತರ ಸ್ವಂತ ಸ್ಥಳವಾದ ಚಿಕ್ಕಬಳ್ಳಾಪುರ ಜಿಲ್ಲೆಯ ಸಂತೆಕಲ್ಲಹಳ್ಳಿಗೆ ಸ್ಥಳಾಂತರಗೊಂಡು ಆ ಪ್ರದೇಶದ ಮಕ್ಕಳಿಗೆ ಅನುಕೂಲವಾಗುವಂತೆ ಹಲವಾರು ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಲೇಖಕ ಬಿ. ಎಸ್. ಜೈಪ್ರಕಾಶ್ ಅವರ ಸಹಯೋಗದಲ್ಲಿ ‘ರಸಾಯನ ವಿಜ್ಞಾನದ ಸಾಮಾನ್ಯ ತತ್ವಗಳು’ ...

READ MORE

Related Books