‘ಆಕಸ್ಮಿಕ ಆವಿಷ್ಕಾರಗಳು’ ಎ.ಓ.ಆವಲ ಮೂರ್ತಿಯವರ ಕೃತಿಯಾಗಿದೆ. ಇದಕ್ಕೆ ಲೇಖಕರ ಬೆನ್ನುಡಿ ಬರಹವಿದೆ; ಬೆಂಕಿ ಕಡ್ಡಿ, ವ್ಯಾಸಲೀನ್, ವೆಲ್ಲೊ, ಚೂಯಿಂಗ್ ಗಮ್, ಸೇಫ್ಟಿ ಪಿನ್, ಐಸ್ ಕ್ರೀಂ ಕೋನ್, ಪೆನಿಸಿಲಿನ್ ಮುಂತಾದ ಆವಿಷ್ಕಾರಗಳು ನಮ್ಮ ಬದುಕನ್ನು ಸುಲಭಗೊಳಿಸಿವೆ, ಹೆಚ್ಚು ಸಹ್ಯಗೊಳಿಸಿವೆ ಮತ್ತು ಆನಂದಮಯವಾಗಿಸಿವೆ. ಆಶ್ಚರ್ಯವೆಂದರೆ ಈ ಚತುರ ಉಪಜ್ಞೆಗಳೆಲ್ಲ ಉದ್ದೇಶಪೂರ್ವಕವಾಗಿ, ಪುನಃ ಪುನಃ ಪ್ರಯತ್ನಿಸಿ, ಕಂಡುಹಿಡಿದವುಗಳಲ್ಲ. ಇವುಗಳೆಲ್ಲ ಏನನ್ನೋ ಕಂಡುಹಿಡಿಯಲು ಹೋಗಿ, ಆಕಸ್ಮಿಕವಾಗಿ ಮತ್ತೇನೋ ಉಪಯುಕ್ತವಾದದ್ದನ್ನು ಕಂಡುಹಿಡಿದದ್ದರ ಫಲವಾಗಿವೆ-ಅದೃಷ್ಟದ ಝಲಕ್ಕೇನೋ ಎಂಬಂತೆ! ಖಚಿತ ದಾರಿಯಲ್ಲಿ ನಡೆಯುವ ವಿಜ್ಞಾನದ ಅನ್ವೇಷಣೆಯಲ್ಲಿ ಅದೃಷ್ಟದಂಥ ಅತೀಂದ್ರಿಯ ಪರಿಕಲ್ಪನೆಗೆ ಯಾವುದಾದರೂ ಸ್ಥಾನವಿದೆಯೆ? ಕೇವಲ ಅದೃಷ್ಟದಿಂದಲೇ ಮಹತ್ತರವಾದದ್ದನ್ನು ಕಂಡು ಹಿಡಿಯುವುದು ಸಾಧ್ಯವೆ? ಮೇಲ್ನೋಟಕ್ಕೆ ಆವೈಜ್ಞಾನಿಕ ರೀತಿಯಲ್ಲಾದ ಈ ವೈಜ್ಞಾನಿಕ ಅನ್ವೇಷಣೆಗಳನ್ನು ವಿವರಿಸುವುದು ಹೇಗೆ? ವಿಜ್ಞಾನಿಗಳ ಮತ್ತು ವಿಜ್ಞಾನದ ಇತಿಹಾಸಕಾರರ ಕುತೂಹಲವನ್ನು ಸಮನಾಗಿ ಕೆರಳಿಸಿರುವ, ವಿಜ್ಞಾನದ ಅಡಿಗಲ್ಲುಗಳನ್ನೇ ಅಲ್ಲಾಡಿಸಿ ಮಾನವ ಕೋಟಿಯ ಬದುಕನ್ನೆ ಬದಲಿಸಿರುವ ಈ ಆಕಸ್ಮಿಕ ಪತ್ತೆಗಳ ಹಿಂದಿನ ತಾಕತ್ತು ಅಡಗಿರುವುದೆಲ್ಲಿ ? ಓದುಗರ ಕುತೂಹಲವನ್ನು ಕೆರಳಿಸಬಲ್ಲ ಇಂಥ 50 ಆಕಸ್ಮಿಕ ಆವಿಷ್ಕಾರಗಳನ್ನು ಇಲ್ಲಿ ಪರಿಚಯಿಸಲಾಗಿದೆ ಎಂಬುವುದನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
©2024 Book Brahma Private Limited.