ಲೇಖಕರಾದ ಶರಣಬಸವೇಶ್ವರ ಅಂಗಡಿ ಹಾಗೂ ಟಿ. ಆರ್. ಅನಂತರಾಮು ಅವರು ರಚಿಸಿದ ಲೇಖನ ಕೃತಿ ʻನಗ್‌ನಗ್ತಾ ವಿಜ್ಞಾನʼ. ಪುಸ್ತಕದಲ್ಲಿ ವಿಸ್ತಾರವಾದ ವಿಷಯಗಳ ಕುರಿತಾದ ಹಲವಾರು ಪ್ರಶ್ನೆಗಳು, ಅದಕ್ಕೆ ವೈಜ್ಞಾನಿಕ ಉತ್ತರಗಳನ್ನು ತಮಾಷೆಯ ರೀತಿಯಲ್ಲಿ ಹೇಳಲಾಗಿದೆ. 'ಎಕ್ಸ್ʼ ಕಿರಣವೇ ಏಕೆ? 'ವೈ' ಕಿರಣ ಯಾಕೆ ಅಲ್ಲ? ಚಂದ್ರ ನೀಲಿಯಾಗುವುದು ಯಾವಾಗ? ಭಾಷಣಕ್ಕೆ ನಿಂತಾಗ ಗಂಟಲು ಒಣಗುವುದು ಏಕೆ? ಗಾಯ ಮಾಯುವಾಗ ನವೆ-ತುರಿಕೆ ಏಕೆ? ಇಂದ್ರಜಾಲದಲ್ಲಿ ಇಂದ್ರ ಹೇಗೆ ಬಂದ? ನಾಯಿ ಮಲಗುವ ಮುನ್ನ ಮೂರು ಸುತ್ತು ಹಾಕುವುದೇಕೆ? ಹೀಗೆ, ನಮ್ಮ ಮುಂದೆಯೆ ನಿತ್ಯವೂ ನಡೆಯುವ, ಆದರೆ ನಾವು ಕ್ಷುಲ್ಲಕ ಎಂದು ಪರಿಗಣಿಸುವ ಹಲವು ಹತ್ತು ವಿಷಯಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ. ಪ್ರತಿಯೊಂದು ಕ್ರಿಯೆಯ ಹಿಂದೆಯೂ ಇರುವ ವಿಜ್ಞಾನವನ್ನು ಬಹಳ ಸರಳವಾಗಿ ಎಲ್ಲಾ ವಯೋಮಾನದವರಿಗೂ ಅರ್ಥವಾಗುವ ರೀತಿಯಲ್ಲಿ ಹೇಳುವ ಪ್ರಯತ್ನ ಈ ಕೃತಿಯಲ್ಲಿ ನಡೆದಿದೆ.
©2024 Book Brahma Private Limited.