ಮಿಲನಿಯಮ್ ಸರಣಿಯು ಸಹಸ್ರಾರು ವರ್ಷಗಳ ಹಲವು ವಿದ್ಯಮಾನಗಳನ್ನು ಕುರಿತ ಪುಸ್ತಕ ಮಾಲೆ. ಮಿಲನಿಯಮ್ ಸರಣಿಯ ಹದಿಮೂರನೆಯ ಪುಸ್ತಕ ವಿಸ್ಮಯ -1. ಕೊಮೊಡೋ ದ್ವೀಪದಲ್ಲಿ ಸಹಸ್ರಾರು ವರ್ಷಗಳಿಂದ ಬದುಕಿ ಬಾಳಿದ ದೈತ್ಯ ಹಲ್ಲಿಯ ವಿವರಗಳು, ರಷ್ಯಾ ಕ್ರಾಂತಿಯ ಸಮಯದಲ್ಲಿ ನಡೆದ ಕಗ್ಗೋಲೆ, ತನ್ನ ಶ್ರೀಮಂತ ನೈಸರ್ಗಿಕ ಸಂಪತ್ತಿನಿಂದಲೇ ದಿವಾಳಿಯಾಗುತ್ತಿರುವ ನೌರು ದ್ವೀಪದ ಕತೆ, ಶ್ರೀಲಂಕಾದಲ್ಲಿ ಕಡಲಾಮೆಗಳನ್ನು ಸಂರಕ್ಷಿಸುವ ಚಂದ್ರಸ್ಸಿರಿಯ ಸಾಹಸ, ಯಾವುದೇ ಪರೀಕ್ಷೆಯೂ ಬಿಡಿಸಲಾಗದ ಟುರಿನ್ ಶಾಲಿನ ರಹಸ್ಯ - ಹೀಗೆ ಜಗತ್ತಿನ ವಿವಿಧೆಡೆಗಳಲ್ಲಿ ಕಂಡುಬರುವ ಅದ್ಭುತ ಕಥಾನಕಗಳ ವಿಸ್ಮಯ ಲೋಕ ಇಲ್ಲಿದೆ.
©2025 Book Brahma Private Limited.