ಲೇಖಕ ಡಾ. ಎ.ಓ. ಆವಲಮೂರ್ತಿ ಅವರು ಬರೆದ ವಿಜ್ಞಾನ ಸಂವಾದ ಕೃತಿ ʻಬೆಳ್ಳಿ ಕಪ್ಪಾಗುವುದು ಯಾಕೆ?ʼ. ಇದು ʼಪುಟ್ಟ- ಕಿಟ್ಟಿ ವಿಜ್ಞಾನ ಸಂವಾದʼದ 17ನೇ ಪುಸ್ತಕವಾಗಿದೆ. ಮಕ್ಕಳಲ್ಲಿ ಸಾಮಾನ್ಯವಾಗಿ ಹುಟ್ಟುವ ವಿಜ್ಞಾನದ ಕುರಿತಾದ ಪ್ರಶ್ನೆಗಳಿಗೆ ಉತ್ತರ ಕೊಡುವ ಮೂಲಕ ಮಕ್ಕಳನ್ನು ಚಿಂತನಶೀಲರನ್ನಾಗಿ ಮಾಡುವ ಕಥನಗಳು ಈ ಪುಸ್ತಕದಲ್ಲಿವೆ. ಬೆಳ್ಳಿ ಕಪ್ಪಾಗುವುದು ಏಕೆ?, ರಾತ್ರಿಯಲ್ಲಿ ಸಮುದ್ರ ಅಲೆಗಳ ಅಬ್ಬರ ಹೆಚ್ಚಾಗುವುದೇಕೆ?, ಮಿಂಚುಹುಳು ಮಿಂಚುವುದೇಕೆ?, ಹಡಗು ತೇಲುವುದು ಹೇಗೆ? ಬಣ್ಣ ಬಣ್ಣದ ಪಟಾಕಿಗಳ ತಯಾರಿಕೆ ಹೇಗೆ? ನಾವೇಕೆ ಮೂಗಿನ ಮೂಲಕವೇ ಉಸಿರಾಡಬೇಕು?, ಚಂಡಮಾರುತ ಉಂಟಾಗುವುದು ಹೇಗೆ?, ಚಂದ್ರನ ಮೇಲೆ ಕಲೆಗಳೇಕೆ?, ಸಸ್ಯಗಳೇಕೆ ಸೂರ್ಯನೆಡೆಗೆ ತಿರುಗುತ್ತವೆ?, ಬ್ರಷ್ ಆಡಿಸಿದಾಗ ನೊರೆ ಬರುವುದೇಕೆ?, ಕೆಲವರ ಕೂದಲೇಕೆ ಗುಂಗುರು?, ನಮ್ಮ ಕಣ್ಣು ಬಣ್ಣಗಳನ್ನು ಗುರುತಿಸುವುದು ಹೇಗೆ?, ಉಲ್ಕಾಪಿಂಡ ಎಂದರೇನು? ಹಾಗೂ ಅಪ್ಪಳಿಕೆ ಆಗುವುದೇಕೆ? ಹೀಗೆ ಒಟ್ಟು 14 ಲೇಖನಗಳಿವೆ.
©2024 Book Brahma Private Limited.