ವಿಜ್ಞಾನ ತಂತ್ರಜ್ಞಾನ ದಾಪುಗಾಲು ಹಾಕುತ್ತ ಸಾಗಿರುವ ಕಾಲಘಟ್ಟದಲ್ಲಿ ನಮ್ಮ ಬದುಕಿನ ಎಲ್ಲ ಮಗ್ಗುಲನ್ನೂ ವಿಜ್ಞಾನ ಆವರಿಸಿಬಿಟ್ಟಿದೆ. ಅದರಲ್ಲೂ ಮಕ್ಕಳಿಗಂತೂ ಎಲ್ಲವೂ ಕುತೂಹಲವೇ. ನಮ್ಮ ರಕ್ತವೇಕೆ ಕೆಂಪು? ಕುದುರೆ ಏಕೆ ನಿಂತುಕೊಂಡೇ ನಿದ್ದೆ ಮಾಡುತ್ತದೆ? ಸ್ಟೀಲ್‍ಪಾತ್ರೆಗೆ ಏಕೆ ತುಕ್ಕು ಹಿಡಿಯುವುದಿಲ್ಲ? ನಮಗೆ ನಾವೇ ಚಕ್ಕುಂಗುಲಿ ಇಟ್ಟುಕೊಂಡರೆ ಏಕೆ ನಗಲಾಗುವುದಿಲ್ಲ? ಮಕ್ಕಳು ಇಂಥ ಪ್ರಶ್ನೆ ಕೇಳಿದಾಗ ಅವರು ವೈಜ್ಞಾನಿಕ ಉತ್ತರಗಳನ್ನು ನಿರೀಕ್ಷಿಸುತ್ತಾರೆ. ಆದ್ದರಿಂದ ಉಪಾಧ್ಯಾಯರ ಜೊತೆಗೆ ಪೋಷಕರ ಪಾತ್ರವೂ ದೊಡ್ಡದಿದೆ. ಸಾಮಾನ್ಯ ವಿಜ್ಞಾನ ವಿಭಾಗಕ್ಕೆ ಸೇರುವ `ವಿಜ್ಞಾನ : ಸವಾಲು-ಜವಾಬು’ ಕೃತಿಯಲ್ಲಿ ಮಕ್ಕಳ ಮನಸ್ಸಿನಲ್ಲಿ ಏಳಬಹುದಾದ ಪ್ರಶ್ನೆಗಳನ್ನು ಗಮನದಲ್ಲಿಟ್ಟುಕೊಂಡು ಸರಳವಾಗಿ, ಆದರೆ ವೈಜ್ಞಾನಿಕವಾಗಿ ಉತ್ತರಗಳನ್ನು ಕೊಡಲಾಗಿದೆ. ಇದನ್ನು ಓದಿದರೆ ದೊಡ್ಡವರ ಜ್ಞಾನವೂ ಹಿಗ್ಗುತ್ತದೆ, ಮಕ್ಕಳ ಮನಸ್ಸೂ ಮುದಗೊಳ್ಳುತ್ತದೆ. ಇಲ್ಲಿಯ ಅನೇಕ ಪ್ರಶ್ನೆಗಳಿಗೆ ಸೂಕ್ತವಾದ ಚಿತ್ರಗಳನ್ನೂ ನೀಡಿರುವುದು ಗ್ರಹಿಕೆಗೆ ಸುಲಭವಾಗಿದೆ.
©2024 Book Brahma Private Limited.