ಲೇಖಕ ಡಾ. ಎ.ಓ. ಆವಲಮೂರ್ತಿ ಅವರು ಬರೆದ ವಿಜ್ಞಾನ ಸಂವಾದ ಕೃತಿ ʻಊಸರವಳ್ಳಿಗಳು ಬಣ್ಣ ಬದಲಿಸುವುದು ಹೇಗೆ?ʼ. ʻಇದು ಪುಟ್ಟ- ಕಿಟ್ಟಿ ವಿಜ್ಞಾನ ಸಂವಾದʼದ ಇಪ್ಪತ್ತನೇ ಪುಸ್ತಕವಾಗಿದೆ. ಸಾಮಾನ್ಯವಾಗಿ ಮಕ್ಕಳು ಬೆಳೆಯುತ್ತಾ ಹೋಗುತ್ತಿದ್ದ ಹಾಗೆ ಅವರಲ್ಲಿ ವಿಜ್ಞಾನದ ಕುರಿತಾದ ಹಲವಾರು ಪ್ರಶ್ನೆಗಳು ಮೂಡುತ್ತವೆ. ಅಂತಹ ಪ್ರಶ್ನೆಗಳನ್ನು ಕೇಳುವ ಅವರ ಉತ್ಸಾಹಕ್ಕೆ ನೀರೆರಚದೆ ಪುಸ್ತಕದ ಮೂಲಕ ಉತ್ತರ ಕೊಡುವ ಕೆಲಸ ಇಲ್ಲಿ ನಡೆದಿದೆ. ಪುಸ್ತಕದ ಬಗ್ಗೆ ಲೇಖಕರೇ ಹೇಳುವಂತೆ, “ನಮ್ಮ ಇವತ್ತಿನ ಶಾಲಾ-ಕಾಲೇಜು ಶಿಕ್ಷಣದಲ್ಲಿ ಪ್ರಶ್ನೆಗಳಿಗೆ ಜಾಗವೇ ಇಲ್ಲ. ವಿದ್ಯಾರ್ಥಿಗಳ ಎದುರಿಗೆ ಅವರೇ 'ಆಲೋಚಿಸಿ' ಉತ್ತರವನ್ನು ಕಂಡುಹಿಡಿದು ಬರೆಯಬೇಕಾದಂಥ ಸಂದರ್ಭಗಳೇ ಇಲ್ಲ. ಆಲೋಚಿಸುವ ಪ್ರಕ್ರಿಯೆಯನ್ನು ರೂಢಿಸುವ ಪ್ರಯತ್ನಗಳೂ ನಡೆಯುತ್ತಿಲ್ಲ. ಎಲ್ಲ ಸಿದ್ಧ ಪ್ರಶ್ನೆಗಳಿಗೂ ಶಿಕ್ಷಕರೇ ಅಥವಾ ಗೈಡ್‌ಗಳೇ ಸಿದ್ಧ ಉತ್ತರಗಳನ್ನು ಸರಬರಾಜು ಮಾಡುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ಪ್ರಶೋತ್ತರವನ್ನು ಕಥನ ರೂಪದಲ್ಲಿ ನಿಜ ಸಂದರ್ಭಗಳ ನಡುವೆ ಸಹಜವಾಗಿ ಏಳುವ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯುವ ಪ್ರಕ್ರಿಯೆಯ ರೂಪದಲ್ಲಿ ನೀಡಲಾಗಿದೆ”. ಕೂದಲು ಬೆಳೆಯುವುದು ಹೇಗೆ?, ಶಕ್ತಿ ಮತ್ತು ಪರಿಸರ, ಭೂಕಂಪ ಅಳೆಯುವುದು ಹೇಗೆ?, ಭೂಮಿಯ ಮೇಲೆ ಜೀವಿಗಳಿರುವುದೇಕೆ?, ಹಿಮನದಿಗಳ ಸ್ಫೋಟ ಎಂದರೇನು?, ಇಲೆಕ್ಟ್ರಾನಿಕ್ ಸೂಕ್ಷ್ಮದರ್ಶಕದ ಅಂತರಂಗ, ಜೀವಸತ್ವಗಳಲ್ಲಿ ಎಷ್ಟು ಬಗೆ?, ಬಣ್ಣಗುರುಡರಲ್ಲಿ ಗಂಡಸರೇ ಹೆಚ್ಚು ಏಕೆ?, ವಿದ್ಯುತ್ ಮೀಟರ್‌ಗಳು ಕೆಲಸ ಮಾಡುವುದು ಹೇಗೆ?, ಚಿಗಟಗಳೇಕೆ ಬೆಕ್ಕು ಮತ್ತು ನಾಯಿಗಳ ಮೇಲೆ ವಾಸಿಸುತ್ತವೆ?, ಊಸರವಳ್ಳಿಗಳು ಬಣ್ಣ ಬದಲಿಸುವುದು ಹೇಗೆ? ಸೇರಿ 14 ಲೇಖನಗಳಿವೆ.
©2024 Book Brahma Private Limited.