ಮಿಲನಿಯಮ್ ಸರಣಿ ಸಹಸ್ರಾರು ವರ್ಷಗಳ ಹಲವು ವಿದ್ಯಮಾನಗಳನ್ನು ಕುರಿತ ಪುಸ್ತಕ ಮಾಲೆ. ಮಿಲನಿಯಮ್ ಸರಣಿಯ ಮೂರನೆ ಪುಸ್ತಕ ’ಪೆಸಿಫಿಕ್ ದ್ವೀಪಗಳು’. ಪೆಸಿಫಿಕ್ ದ್ವೀಪಗಳ ವೈವಿಧ್ಯಮಯ ಬದುಕನ್ನು ಚಿತ್ರಿಸುವ ಪುಸ್ತಕ. ನರಭಕ್ಷಕರಾಗಿದ್ದ ಫಿಜಿಯನ್ನರು ಮತ್ತು ಸಾವಿರಾರು ಮೈಲು ಪಯಣಿಸುವ ಸಾಹಸಿ ನಾವಿಕರೆನಿಸಿದ್ದ ಪಾಲಿನೇಷ್ಯನ್ನರಂಥ ಬುಡಕಟ್ಟು ಜನಾಂಗಗಳು ಪೆಸಿಫಿಕ್ ಸಾಗರದ ವಿಶಾಲ ಜಲರಾಶಿಯಲ್ಲಿ ವಿರಳವಾಗಿ ಹರಡಿಕೊಂಡಿರುವ ದ್ವೀಪಗಳಲ್ಲಿ ಬದುಕುತ್ತಿದ್ದರು. ನಾಗರೀಕ ಪ್ರಪಂಚದ ಸ್ಪರ್ಶವೇ ಇಲ್ಲದಿದ್ದ ಈ ಸುಂದರ ದ್ವೀಪಗಳು ಪಾಶ್ಚಾತ್ಯರು ಹೆಜ್ಜೆಯಿಟ್ಟಂತೆಲ್ಲ ಕಲುಷಿತಗೊಂಡವು. ಕ್ರೈಸ್ತ ಧರ್ಮ ಮತ್ತು ಆಧುನೀಕರಣದ ತುಳಿತಕ್ಕೆ ಸಿಕ್ಕಿ, ಅಲ್ಲಿನ ಮೂಲನಿವಾಸಿಗಳ ಬದುಕು ಅಸ್ತವ್ಯಸ್ತವಾಯಿತು. ಮಹಾಯುದ್ದಗಳ ಕಾಲದಲ್ಲಿ ಈ ದ್ವೀಪಗಳು ಎರಡೂ ಸೇನೆಗಳ ಸಮರ ವೇದಿಕೆಯಾಗಿದ್ದಲ್ಲದೆ, ಅನಂತರದಲ್ಲೂ ಇಲ್ಲಿ ಪರಮಾಣು ಸ್ಫೋಟ ಪ್ರಯೋಗಗಳು ನಡೆದವು. ಈ ಪುಸ್ತಕದ ಒಟ್ಟು ಉದ್ದೇಶ ಇದನ್ನು ಮನದಟ್ಟು ಮಾಡಿಸುವುದೇ ಆಗಿದೆ. ಪುಸ್ತಕದ ಕೊನೆಯಲ್ಲಿರುವ 'ರೈಟೀಯಾ' ಎಂಬ ಕಿರುಕಾದಂಬರಿ ಪೆಸಿಫಿಕ್ ದ್ವೀಪಗಳ ದುರಂತದ ಸ್ವರೂಪಗಳನ್ನು ಸೂಕ್ಷ್ಮವಾಗಿ ದಾಖಲಿಸುತ್ತದೆ.
©2024 Book Brahma Private Limited.