ಕೈವಾರ ಗೋಪಿನಾಥ್
ವೈಜ್ಞಾನಿಕ ಲೇಖಕ ಎಂದೇ ಖ್ಯಾತಿ ಪಡೆದ ಕೈವಾರ ಗೋಪಿನಾಥ್ ಹುಟ್ಟಿದ್ದು ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ. ಜನನ 1943 ಏಪ್ರಿಲ್ 23ರಂದು. ತಂದೆ ಕೈವಾರ ರಾಜಾರಾಯರು, ತಾಯಿ ಕಮಲಾಬಾಯಿ. ಕಲೆಯ ವಾತಾವರಣದಲ್ಲಿ ಬೆಳೆದುಬಂದ ಗೋಪಿನಾಥ್ ಅವರಿಗೂ ಬಾಲ್ಯದಿಂದಲೂ ಸಾಹಿತ್ಯದಲ್ಲಿ ನಂಟು ಬೆಳೆದಿತ್ತು. ನಂತರ ವಿಜ್ಞಾನಕ್ಷೇತ್ರದ ಬರವಣಿಗೆ ಪ್ರಾರಂಭಿಸಿದರು. ಅವರ ವೈಜ್ಞಾನಿಕ ಬಿಡಿ ಬರೆಹಗಳು ಪ್ರಜಾವಾಣಿ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಸಂಜೆವಾಣಿ, ಕೋಲಾರ ಪತ್ರಿಕೆ ಮುಂತಾದ ದಿನ ಪತ್ರಿಕೆ, ಹಾಗೂ ಸುಧಾ, ತರಂಗ, ಕರ್ಮವೀರ, ಪ್ರಜಾಮತ ಹೊಸತು, ತುಷಾರ, ಉತ್ಥಾನ ಮುಂತಾದ ವಾರಪತ್ರಿಕೆ, ಮಾಸ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಚಾರ್ಲ್ಸ್ ಡಾರ್ವಿನ್, ...
READ MORE