1918-19ರಲ್ಲಿಯೇ ಕನ್ನಡದಲ್ಲಿ ವಿಜ್ಞಾನ ವಿದ್ಯಮಾನಗಳನ್ನು ಕುರಿತು ಪ್ರಕಟವಾಗುತ್ತಿದ್ದ ಪತ್ರಿಕೆ ’ವಿಜ್ಞಾನ’. ಅದರ ಸಂಪಾದಕರು ಬಿ.ವೆಂಕಟನಾರಾಣಪ್ಪ ಮತ್ತು ನಂಗಪುರಂ ವೆಂಕಟೇಶಯ್ಯಂಗಾರ್‍ಯರು . ವೈಜ್ಞಾನಿಕ ಪರಿಭಾಷೆಗಳು ಕನ್ನಡದಲ್ಲಿ ಬೆಳೆಯದ ಹೊತ್ತಿನಲ್ಲಿ ವಿಜ್ಞಾನಕ್ಕೇ ವಿಶೇಷವಾದ ಪತ್ರಿಕೆಯೊಂದನ್ನು ಅವರು ಹೊರತರುತ್ತಿದ್ದುದು ಸಾಹಸವೇ ಸರಿ.
ಅಂತಹ ಸಾಹಸವನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ವಿಜ್ಞಾನ ಲೇಖಕರಾದ ಪ್ರೊ. ಎಚ್.ಆರ್. ರಾಮಕೃಷ್ಣರಾವ್ ಮತ್ತು ಟಿ.ಆರ್. ಅನಂತರಾಮು ಪತ್ರಿಕೆಗಳಲ್ಲಿ ಪ್ರಕಟವಾದ ಪ್ರಮುಖ ಲೇಖನಗಳನ್ನು ಈ ಕೃತಿಯಲ್ಲಿ ಸಂಗ್ರಹಿಸಿಕೊಟ್ಟಿದ್ದಾರೆ.
©2024 Book Brahma Private Limited.