`ನಿಮ್ಮೊಳಗೊಬ್ಬ ಜೀನಿಯಸ್’ ಹದಿನೈದು ವಿಜ್ಞಾನ ಪ್ರಬಂಧಗಳ ಸಂಕಲನ. ಸಾಮಾನ್ಯ ವಿಜ್ಞಾನಕ್ಕೆ ಸಂಬಂಧಿಸಿದ ಇಲ್ಲಿನ ಪ್ರಬಂಧಗಳು ಜನಪ್ರಿಯ ದಾಟಿಯಲ್ಲಿ ಬರೆದವು. ಒಂದೊಂದು ಲೇಖನವೂ ಭಿನ್ನ ಸ್ವರೂಪದಿಂದ ಓದುಗರಿಗೆ, ಅದರದೇ ಆದ ರೀತಿಯಲ್ಲಿ ಮನಮುಟ್ಟುತ್ತದೆ.
ನಿಮಗೆ ಗೊತ್ತೆ? ಸೌರಮಂಡಲದಲ್ಲಿ ಪಿಕ್‍ನಿಕ್ ಸ್ಪಾಟ್‍ಗಳಿವೆ, ನಿಮ್ಮೊಳಗೇ ಒಬ್ಬ ಮಹಾನ್ ಪ್ರತಿಭಾವಂತ ಅಡಗಿದ್ದಾನೆ, ನಮ್ಮ ಪ್ರವಾಸಿ ತಾಣಗಳು ಹೇಗಿದ್ದರೆ ಪ್ರವಾಸಿಗಳನ್ನು ಇನ್ನೂ ಹೆಚ್ಚು ಆಕರ್ಷಿಸಬಹುದು? ನಮ್ಮ ನಿತ್ಯ ಬದುಕಿನಲ್ಲೆ ಖನಿಜಗಳ ದೊಡ್ಡ ಪಾತ್ರವಿದೆ. ಪ್ಲಾಸ್ಟಿಕನ್ನು ಮುಕ್ತ ಮುಕ್ತ ಎಂದು ಹೇಳುವುದು ಯಾವಾಗ? ವಿಶ್ವರೂಪವನ್ನು ದರ್ಶನ ಮಾಡಿಸುವ ಇತ್ತೀಚಿನ ದೂರದರ್ಶಕಗಳು, ಜೊತೆ ಜೊತೆಗೇ ನೀವು ವಿಜ್ಞಾನ ಸಾಹಿತ್ಯ ರಚಿಸಬೇಕೆಂದರೆ, ಅದಕ್ಕೆ ಬೇಕಾಗುವ ಮಾನಸಿಕ ಸಿದ್ಧತೆ ಹೇಗಿರಬೇಕು? ಇವೆಲ್ಲವನ್ನೂ ಒಟ್ಟಿಗೇ ಕಟ್ಟಿಕೊಡುತ್ತದೆ ಈ ಕೃತಿ. ಇಲ್ಲಿಯ ಅನೇಕ ಲೇಖನಗಳಿಗೆ ಹೊಸ ಮಾಹಿತಿ ಸೇರಿಸಿದೆ. ಈ ಕ್ಷೇತ್ರಗಳಲ್ಲಿ ಆಸಕ್ತಿ ಇರುವವರಿಗೆ ಒಂದಷ್ಟು ಹೊಸ ಬಗೆಯ ಯೋಚನೆಗಳನ್ನು ಈ ಕೃತಿ ಹುಟ್ಟುಹಾಕುತ್ತದೆ.
©2025 Book Brahma Private Limited.