ಖ್ಯಾತ ವ್ಯಂಗ್ಯಚಿತ್ರ ಕಲಾವಿದ ಹಾಗೂ ಲೇಖಕ ಜಿ.ವಿ. ಗಣೇಶಯ್ಯ ಅವರ ಕೃತಿ-ಇಂದ್ರಜಾಲದ ಅಂತರಂಗ. ಮ್ಯಾಜಿಕ್ ಅಥವಾ ಜಾದೂ ವಿದ್ಯೆಯ ಹಿಂದೆ ಕೇವಲ ಕಣ್ಕಟ್ಟು ಇರುತ್ತದೆ. ವಿಶೇಷ ಶಕ್ತಿ-ಸಾಮರ್ಥ್ಯ ಇರದು. ಒಂದು ಗುಟ್ಟನ್ನು ತನ್ನೊಡಲಲ್ಲಿಟ್ಟುಕೊಂಡು ಜಾದೂಗಾರ ಆಟಗಳನ್ನು ಆಡುತ್ತಾನೆ. ಮಕ್ಕಳನ್ನು ರಂಜಿಸುತ್ತಾನೆ. ಅಚ್ಚರಿಪಡಿಸುತ್ತಾನೆ. ಇದಕ್ಕೆ, ದೊಡ್ಡವರೂ ಹೊರತಲ್ಲ. ತಾನೂ ಮಾಡಬೇಕೆಂಬ ಹಂಬಲ ಮೂಡುವಷ್ಟು ತೀವ್ರವಾಗಿರುತ್ತದೆ-ಈ ಜಾದೂವಿನ ಪ್ರೇರಣೆ. ಇದಕ್ಕೆ ಬೇಕಿರುವ ಬಂಡವಾಳವೆಂದರೆ ಕೇವಲ ಚಮತ್ಕಾರ ಮತ್ತು ಕೈಚಳಕ. ಇಂತಹ ಸಂಗತಿಗಳ ಕುರಿತ ವಿವರಣೆ ಒಳಗೊಂಡಿರುವ ಕೃತಿ ಇದು.
©2024 Book Brahma Private Limited.