ನವಕರ್ನಾಟಕ ಪ್ರಕಾಶನದ ಪುಟ್ಟ ಕಿಟ್ಟ ವಿಜ್ಞಾನ ಸಂವಾದ ಸರಣಿ ಮಾಲೆಯಡಿ ಲೇಖಕ ಎ.ಓ. ಅವಲಮೂರ್ತಿ ಅವರು ಮಕ್ಕಳಿಗಾಗಿ ಬರೆದ ಕೃತಿ-ತಂಪು ಪಾತ್ರೆ, ಜೋಕೆ! ಮಕ್ಕಳನ್ನು ಚಿಂತನಾಶೀಲರನ್ನಾಗಿಸುವ ಉದ್ದೇಶದಿಂದ ಆರಂಭಿಸಲಾದ ಈ ಸರಣಿಯಲ್ಲಿ ಸುತ್ತಮುತ್ತಲು ನಡೆಯುವ ಸಣ್ಣ ಸಣ್ಣ ಸಂಗತಿಗಳೆಡೆಗೆ ಮಕ್ಕಳು ಗಮನ ಹರಿಸಿ, ವೈಜ್ಞಾನಿಕ ದೃಷ್ಟಿಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುವಂತೆ ಕೃತಿಯನ್ನು ರಚಿಸಿದ್ದು ವೈಶಿಷ್ಟ್ಯ. ಇದರಿಂದ, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ದೃಢವಾಗುತ್ತದೆ ಮತ್ತು ಮಕ್ಕಳು ವಿಜ್ಞಾನವನ್ನು ಕುತೂಹಲದಿಂದ ಕಲಿಯುತ್ತಾರೆ ಹಾಗೂ ಮನರಂಜನೆಯೂ ಇಲ್ಲಿರುವುದರಿಂದ ಕಲಿಕೆ ಅರ್ಥಪೂರ್ಣವಾಗಿಸುತ್ತದೆ.
©2024 Book Brahma Private Limited.