ಭೂಗೋಳದ ದಕ್ಷಿಣ ಧ್ರುವದ ಸುತ್ತಲೂ ಹರಡಿರುವ ಅಂಟಾರ್ಕ್‍ಟಿಕ ಖಂಡ ಮನುಷ್ಯನ ಅಪಾರ ಕುತೂಹಲ ಮತ್ತು ನಿರಂತರ ಆಸಕ್ತಿಗಳ ಕೇಂದ್ರ ಬಿಂದುವಾಗಿದೆ. ಪ್ರೌಢಶಾಲೆಗಳಲ್ಲಿ ಪಾಠ ಬೋಧನೆ ಮಾಡಲು ಹಾಗೂ ಮನನ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಇದು ಆಕರ ಗ್ರಂಥವಾಗಿದೆ. ವಿಶೇಷವೆಂದರೆ ಇಡೀ ಕೃತಿಯಲ್ಲಿ ಅತ್ಯಾಕರ್ಷಕ ಬಣ್ಣದ ಚಿತ್ರಗಳಿದ್ದು, ಆಕರ್ಷಕವಾಗಿದೆ.
ಅಂಟಾರ್ಕ್‍ಟಿಕ ಕುರಿತು ಸಾಮಾನ್ಯ ಪರಿಚಯ, ಅಂಟಾರ್ಕ್‍ಟಿಕ ಯಾತ್ರೆ, ಅಲ್ಲಿಯ ಹಿಮಗಡ್ಡೆ, ನೆಲ-ಜಲ, ಖನಿಜ ಮತ್ತು ಜೀವಿ ಸಂಪನ್ಮೂಲ, ಬಾನು ತೋರುವ ಚಮತ್ಕಾರ, ಭಾರತದ ಅಂಟಾರ್ಕ್‍ಟಿಕ ಯಾತ್ರೆ ಮತ್ತು ಅಂಟಾರ್ಕ್‍ಟಿಕ ಒಪ್ಪಂದದಲ್ಲಿ ಯಾವ ಯಾವ ಅಂಶಗಳಿವೆ ಎಂಬುದನ್ನು ವಿದ್ಯಾರ್ಥಿಗಳಿಗೆ ಸರಳವಾಗಿ ಅರ್ಥವಾಗುವಂತೆ ನಿರೂಪಿಸಲಾಗಿದೆ. ಅಂಟಾರ್ಕ್‍ಟಿಕ ಖಂಡದ ವೈಶಿಷ್ಟ್ಯಗಳು ಮತ್ತು ಭಾರತದಲ್ಲಿ ಯಾವ ಯಾವ ವಿಜ್ಞಾನ ಸಂಸ್ಥೆಗಳು ಅಂಟಾರ್ಕ್‍ಟಿಕದಲ್ಲಿ ಪ್ರಯೋಗ ಮಾಡುತ್ತಿವೆ ಎಂಬ ವಿರಳ ಮಾಹಿತಿಯೂ ಇದೆ. ಸಾಮಾನ್ಯ ವಿಜ್ಞಾನದ ಭಾಗವಾಗಿ ಲೇಖಕ, ಭೂವಿಜ್ಞಾನಿ ಟಿ.ಆರ್. ಅನಂತರಾಮು ಅವರು ಈ ಕೃತಿಯನ್ನು ರಚಿಸಿದ್ದಾರೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಪೇತಿ ನಿರ್ದೇಶನಾಲಯ ಪ್ರಕಟಿಸಿದ್ದು, ಈ ಕೃತಿಗೆ ಬೆಲೆಯನ್ನು ನಿಗದಿ ಪಡಿಸಿಲ್ಲ
©2025 Book Brahma Private Limited.