ತೇಜಸ್ವಿ ಮತ್ತು ಡಾ.ಎ.ವಿ.ಬೆಳವಾಡಿ ಅವರು ರಚಿಸಿರುವ ಹುಳುಗಳ ವಿಸ್ಮಯ ಕೋಶ (1) ’ನಡೆಯುವ ಕಡ್ಡಿ! ಹಾರುವ ಎಲೆ!’. ನಮ್ಮ ಸುತ್ತಲೇ ಇದ್ದರೂ, ನಾವು ಕುತೂಹಲ ತಾಳದ ಕೀಟಗಳನ್ನು ಕಥೆಯ ರೂಪದಲ್ಲಿ ಈ ಪುಸ್ತಕ ಪರಿಚಯಿಸುತ್ತದೆ. ಚಿಟ್ಟೆ, ಜೇಡ, ಜಿರಳೆ, ಮಿಡತೆ, ಜೀರುಂಡೆ, ಮಿಂಚುಹುಳು - ಇಂಥ ಅಸಂಖ್ಯ ಕೀಟಗಳು ಪ್ರಕೃತಿ ವಿಕೋಪಗಳು ಮತ್ತು ಮನುಷ್ಯನಿಂದಾಗುತ್ತಿರುವ ಅನಾಹುತಗಳನ್ನು ಎದುರಿಸಿ ಹೇಗೆ ಬದುಕುತ್ತಿವೆ? ಅವುಗಳ ಜೀವವಿಕಾಸದ ಅವಸ್ಥಾಂತರಗಳ ಕಥೆಯೇನು? ಎಂಬ ವಿಷಯಗಳನ್ನು ಸಂಶೋಧನೆ ಮತ್ತುದೈನಂದಿನ ಅನುಭವಗಳ ಮೂಲಕ ಲೇಖಕರು ಇಲ್ಲಿ ಸಾದರಪಡಿಸಿದ್ದಾರೆ.
©2024 Book Brahma Private Limited.