ಭಾಷಣಗಳು ಮತ್ತು ಲೇಖನಗಳು-1

Author : ಎ.ಆರ್.  ಕೃಷ್ಣಶಾಸ್ತ್ರಿ

Pages 240

₹ 3.00




Year of Publication: 1948
Published by: ವೆಂಕಣ್ಣಯ್ಯನವರ ಸ್ಮಾರಕ ಗ್ರಂಥಮಾಲೆ
Address: ಟಿ.ಎಸ್. ಶಾಮರಾವ್, ಮೈಸೂರು

Synopsys

ಪ್ರೊ. ಟಿ.ಎಸ್.ವೆಂಕಣ್ಣಯ್ಯನವರು ಎ.ಆರ್. ಕೃಷ್ಣಶಾಸ್ತ್ರಿಗಳ ಆಪ್ತರು. ಸಾಹಿತ್ಯಕ್ಕೆ ಸಂಬಂಧಿಸಿದ ಯಾವುದೇ ವಿಚಾರವು ಇವರ ಮಧ್ಯೆ ವಿನಿಮಯಗೊಳ್ಳುತ್ತಿತ್ತು. ವೆಂಕಣ್ಣಯ್ಯನವರು ಇಹಲೋಕ ತ್ಯೆಜಿಸಿದಾಗ ಅವರ ಸ್ನೇಹದ ಕುರುಹಾಗಿ, ಶಾಸ್ತ್ರಿಗಳು ವೆಂಕಣ್ಣಯ್ಯನವರಿಗೆ ಸಂಬಂಧಿಸಿದ ವೈಚಾರಿಕ-ಬೌದ್ಧಿಕ-ಸಾಹಿತ್ಯಕ-ಭಾಷೆ-ಸಾಮಾಜಿಕ-ಹೀಗೆ ಹಲವು ವಲಯಗಳ ವಿಚಾರಗಳನ್ನು ಸಂಗ್ರಹಿಸಿ ನೀಡಿದ್ದರ ಫಲವೇ ಈ ಕೃತಿ-ಭಾಷಣಗಳು ಮತ್ತು ಲೇಖನಗಳು-ಸಂಪುಟ-1.

ದಿವಂಗತ ಶ್ರೀಮಾನ್ ಟಿ.ಎಸ್.ವೆಂಕಣ್ಣಯ್ಯನವರು ಕುರಿತು ಸವಿವರವಾದ ಪೀಠಿಕೆ-ಪ್ರಸ್ತಾವನೆ, ಭಾಷಣದ ವಿಭಾಗದಲ್ಲಿ ಇಂದಿನ ಜನಜೀವನದಲ್ಲಿ ಕನ್ನಡ, ಸಾಹಿತ್ಯೋತ್ಸವದ ಆರಂಭ ಭಾಷಣ ಹಾಗೂ ಲೇಖನಗಳ ವಿಭಾಗದಲ್ಲಿ, ರನ್ನನ ರಸ ಪ್ರತಿಪಾದನೆ, ಹರಿಶ್ಚಂದ್ರ ಕಾವ್ಯ, ಮಲ್ಲಿಕಾರ್ಜುನ -ಒಂದು ಊಹೆ, ತತ್ವಶಾಸ್ತ್ರ ಮತ್ತು ಅದರ ಪರಿಹಾರಗಳು, ದೇವೀ ಭಾಗವತ -ಲೇಖನಗಳಿವೆ.

About the Author

ಎ.ಆರ್.  ಕೃಷ್ಣಶಾಸ್ತ್ರಿ
(12 February 1890 - 01 February 1968)

ಮಹಾಭಾರತವನ್ನು ಸರಳಗನ್ನಡದಲ್ಲಿ ಹೇಳುವ ವಚನ ಭಾರತದ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರಿರುವ ಎ.ಆರ್. ಕೃಷ್ಣಶಾಸ್ತ್ರಿಗಳು ಪ್ರಬುದ್ಧ ಕರ್ನಾಟಕ ಪತ್ರಿಕೆಯ ಸ್ಥಾಪಕರಾಗಿ, ಸಂಪಾದಕರಾಗಿ ನೀಡಿದ ಕೊಡುಗೆ ಅಮೂಲ್ಯ. 1890ರ ಫೆಬ್ರುವರಿ 12ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಅಂಬಳೆ ರಾಮಕೃಷ್ಣಶಾಸ್ತ್ರಿ ತಾಯಿ ವೆಂಕಮ್ಮ. ತಂದೆಯಿಂದ ಸಂಸ್ಕೃತ ವ್ಯಾಸಂಗ ಮಾಡಿದ ಶಾಸ್ತ್ರಿಗಳು ವೆಸ್ಲಿಯನ್ ಪ್ರೌಢಶಾಲೆಯಲ್ಲಿ ಶಿಕ್ಷಣ ಮುಗಿದ ಮೇಲೆ ಬಿ.ಎ. ಪದವಿ (1913)  ಮತ್ತು ಮದರಾಸಿನಲ್ಲಿ ಕನ್ನಡ ಎಂ.ಎ. (1915) ಪದವಿ ಪಡೆದರು. ಪ್ರಾರಂಭದಲ್ಲಿ ಡೆಪ್ಯೂಟಿ ಕಮೀಷನರ್ ಆಫೀಸಿನಲ್ಲಿ ಅನಂತರ ಓರಿಯಂಟಲ್ ಲೈಬ್ರರಿಯಲ್ಲಿ ಕೆಲಸ ಮಾಡಿದ ಅವರು ನಂತರ 1916ರಲ್ಲಿ ಸೆಂಟ್ರಲ್ ...

READ MORE

Related Books