ಪ್ರೊ. ಎಚ್.ಆರ್. ರಾಮಕೃಷ್ಣರಾವ್ ಅವರು ಕ್ರೈಸ್ಟ್ ಕಾಲೇಜಿನ ನಿವೃತ್ತ ಭೌತವಿಜ್ಞಾನ ಪ್ರಾಧ್ಯಾಪಕರು. ಉದಯಭಾನು ಉನ್ನತ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಮತ್ತು ಬೆಂಗಳೂರು ವಿಜ್ಞಾನ ವೇದಿಕೆಯ ಖಜಾಂಚಿಯಾಗಿ ಕೆಲಸ ಮಾಡುತ್ತಿದ್ದಾರೆ. ಖಭೌತ ವಿಜ್ಞಾನ ಇವರ ಆಸಕ್ತ ವಿಷಯವಾಗಿದ್ದು ತಮ್ಮಲ್ಲಿದ್ದ ದೂರದರ್ಶಕವನ್ನು ಕರ್ನಾಟಕದ ಹಳ್ಳಿ-ಹಳ್ಳಿಗಳಿಗೆ ಹೋಗಿ ಜನರಿಗೆ ಆಕಾಶ ವೀಕ್ಷಣೆ ಮಾಡಿಸಿ, ವೈಜ್ಞಾನಿಕ ಅರಿವನ್ನು ಮೂಡಿಸಿದ್ದಾರೆ. ಸಂಕ್ಷಿಪ್ತ ಖಗೋಳ ವಿಜ್ಞಾನ ಚರಿತ್ರೆ, ಕಲಾಂ ಮೇಷ್ಟ್ರು, 20ನೇ ಶತಮಾನದ ಭೌತವಿಜ್ಞಾನ, ಒಲವಿನ ಶಿಲೆ ಅಯಸ್ಕಾಂತ, ಅಂತರಿಕ್ಷ, ಶುಕ್ರಸಂಕ್ರಮ, ಬಿಗ್ ಬ್ಯಾಂಗ್, ಪ್ರಳಯ 2012, ಮುಂತಾದವುಗಳು ಇವರ ಪ್ರಮುಖ ಕೃತಿಗಳು.