ಆಧುನಿಕ ಕನ್ನಡ ನಾಟಕಗಳನ್ನು ಗ್ರಹಿಸುವ ಹೊಸ ಮನೋಧರ್ಮವನ್ನು ಈ ಪ್ರಬಂಧಗಳು ನೀಡಲಿದ್ದು ಕೃತಿಗೆ ಆಶಯ ನುಡಿ ಬರೆದಿರುವ ನಟರಾಜ್ ಹುಳಿಯಾರ್ ಅವರು “ಕನ್ನಡ ನಾಟಕಗಳ ಅಧ್ಯಯನದಲ್ಲಿ ಈವರೆಗೆ ಕಾಣದಿರುವ ಹೊಸ ಹಾದಿಯೊಂದನ್ನು ಈ ಪುಸ್ತಕ ತೆರೆಯುತ್ತಿದೆ. ಪ್ರಭುತ್ವ ಹಾಗೂ ಯಾಜಮಾನ್ಯದ ಸ್ವರೂಪಗಳನ್ನು ಗ್ರಹಿಸಲು ಈ ಅಧ್ಯಯನ ಸ್ವೀಕರಿಸಿರುವ ಜಾಗತಿಕ ಪರಿಕಲ್ಪನೆಗಳು ಕನ್ನಡ ನಾಟಕಗಳನ್ನು ಹೊಸ ನೆಲೆಯಲ್ಲಿ ನೋಡುವ ವಿಶಿಷ್ಟ ಬಗೆಯೊಂದನ್ನು ಒದಗಿಸಿಕೊಟ್ಟಿವೆ. ಕನ್ನಡದ ಪ್ರಮುಖ ನಾಟಕಕಾರರ ಈ ವಸ್ತುಕೇಂದ್ರಿತ ಅಧ್ಯಯನ ಕನ್ನಡ ನಾಟಕದ ಹೊಸ ಬಗೆಯ ಚರಿತ್ರೆಯೂ ಆಗಿದೆ” ಎಂದಿದ್ದಾರೆ.
©2024 Book Brahma Private Limited.