ತೆಂಕಣ ನುಡಿಗಳು ಮತ್ತು ಸ್ತ್ರೀ ಸಂವೇದನೆ

Author : ವಿನಯಾ ಒಕ್ಕುಂದ

Pages 162

₹ 150.00




Year of Publication: 2016
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560078
Phone: 102 - 23183311, 23183312

Synopsys

ಭಾರತೀಯ ಭಾಷಾ ಸಂಸ್ಕೃತಿಗಳೊಡನೆ ಇಂಗ್ಲಿಷ್ ಭಾಷೆಯು ಹಲವು ಕಾರಣಗಳಿಂದ ತಿಕ್ಕಾಟದ ನಂಟನ್ನು ಹೊಂದಿದ್ದು, ದಶಕಗಳು ಕಳೆದಂತೆ ಈ ಬಗೆ ಬದಲಾಗುತ್ತಾ ಬಂದಿದೆ. ಬೇರೆ ಬೇರೆ ಭಾಷಾ ಸಂಸ್ಕೃತಿಗಳು ಈ ಬಗೆಯನ್ನು ಹೇಗೆ ಗ್ರಹಿಸಿವೆ ಮತ್ತು ಅದಕ್ಕೆ ಹೇಗೆ ಪ್ರತಿಕ್ರಯಿಸುತ್ತಿವೆ ಎಂಬ ಬಗ್ಗೆ ದಕ್ಷಿಣ ಭಾರತದ ಭಾಷೆಗಳನ್ನು ಗಮನದಲ್ಲಿಟ್ಟುಕೊಂಡು, ಕನ್ನಡ, ತಮಿಳು, ತೆಲಗು, ಮಲಯಾಳಂ ಮತ್ತು ತುಳು ಭಾಷೆಗಳು ಇಂಗ್ಲಿಷಿನೊಡನೆ ನಡೆಸುತ್ತಿರುವ ಅನುಸಂಧಾನವನ್ನು ಅರಿಯಲು ಆಯಾ ಭಾಷೆಯ ಚಿಂತಕರು ಬರೆದಿರುವ ಬರಹಗಳನ್ನು ಒಳಗೊಂಡ ಈ ಸಂಕಲನವು ಭಾರತದಲ್ಲಿ ಇಂಗ್ಲಿಷ್ ನೆಲೆಯೂರಿದ ಇತಿಹಾಸ, ಶಿಕ್ಷಣದಲ್ಲಿ ಇಂಗ್ಲಿಷನ್ನು ಕಲಿಯುವ ಅವಕಾಶ, ಭಾರತದಲ್ಲಿ ಬಹುಭಾಷೀಯತೆಯ ಸಮತೋಲನ, ಭಾರತದಲ್ಲಿ ಇಂಗ್ಲಿಷ್ ಭಾಷೆಯ ಸ್ಥಾನಮಾನ ಹಾಗೂ ದಕ್ಷಿಣ ಭಾರತದ ಭಾಷೆಗಳೊಂದಿಗಿನ ಇಂಗ್ಲಿಷಿನ ಸಂಬಂಧ, ಅದರ ಸ್ವರೂಪ, ಸಂಬಂಧ, ಅದರ ಸ್ಥಾನಮಾನಗಳನ್ನು ಕುರಿತು ಚರ್ಚಿಸುತ್ತದೆ.

About the Author

ವಿನಯಾ ಒಕ್ಕುಂದ
(24 October 1968)

ವಿನಯಾ- ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ, ಕುಮಟಾ ತಾಲೂಕಿನ ನಾಡುಮಾಸ್ಕೇರಿಯಲ್ಲಿ. ಕರ್ನಾಟಕ ವಿಶ್ವವಿದ್ಯಾಲಯದಿಂದ 1990ರಲ್ಲಿ ಕನ್ನಡ ಎಂ.ಎ, 1992ರಲ್ಲಿ ಎಂ.ಫಿಲ್. ಹಾಗೂ 1996ರಲ್ಲಿ ಪಿಎಚ್.ಡಿ ಪದವಿ ಪಡೆದಿದ್ದು, ಸವಣೂರು, ನರಗುಂದದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಧ್ಯ ಧಾರವಾಡ ಜಿಲ್ಲೆಯ ಅಳ್ಳಾವರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಇವರು ಹಲವು ಕೃತಿಗಳನ್ನು ರಚಿಸಿದ್ದಾರೆ. ವಿನಯಾ ಅವರ ಕವನ ಸಂಕಲನಗಳು: ಬಾಯಾರಿಕೆ, ನೂರು ಗೋರಿಯ ದೀಪ, ಹಸಬಿ, ಇನ್ನೂ ಕಥಾ ಸಂಕಲನಗಳು: ಊರ ...

READ MORE

Related Books