ಸಾಹಿತಿ ದಿಗ್ಗಜಗಳಾದ ಟಿ.ಎಸ್.ವೆಂಕಣ್ಣಯ್ಯ ಹಾಗೂ ಎ.ಆರ್ ಕೃಷ್ಣಶಾಸ್ತ್ರಿ ಅವರು ಬರೆದ ಕೃತಿ-ಶ್ರೀ ರಾಮಕೃಷ್ಣ ಪರಮಹಂಸರ ಚರಿತ್ರೆ. ಜ್ಞಾನ ಸಂಪಾದನೆಗೆ ಸತ್ಸಂಗವೇ ಆಧಾರ. ಈ ಸತ್ಸಂಗಕ್ಕೆ ರಾಮಕೃಷ್ಣ ಪರಮಹಂಸರಂತಹ ಸಾಹಿತ್ಯದ ಓದು ಪ್ರೇರಣೆಯಾಗಬಲ್ಲುದು. ರಾಮಕೃಷ್ಣರಂತಹ ಮಹಾನುಭಾವರ ಜೀವನ ಚರಿತ್ರೆಯನ್ನು ಈ ಚಿಕ್ಕ ಕೃತಿಯಲ್ಲಿ ಕಟ್ಟಿಕೊಡುವುದು ಅಸಾಧ್ಯ. ಆದರೆ, ಅವರ ಜೀವನದ ಪ್ರಮುಖ ಘಟನೆಗಳು ಹಾಗೂ ಸಂದೇಶಗಳನ್ನು ಸಂಕ್ಷಿಪ್ತವಾಗಿ ದಾಖಲಿಸಲಾಗಿದೆ. ರಾಮಕೃಷ್ಣರ ತಂದೆ-ತಾಯಿಗಳು, ಜನನ ಮತ್ತು ಬಾಲ್ಯ, ದಕ್ಷಿಣೇಶ್ವರದ ಕಾಳಿ ದೇವಸ್ಥಾನ, ಅವರ ಅಧ್ಯಾತ್ಮಿಕ ಸಾಧನಗಳು, ಗುರುಭಾವ, ಮಹಾಸಮಾಧಿ ಹೀಗೆ ವಿವಿಧ ಅಧ್ಯಾಯಗಳಡಿ ರಾಮಕೃಷ್ಣ ಪರಮಹಂಸರ ಜೀವನವನ್ನು ಕೃತಿಯ ಮಿತಿಯಲ್ಲಿ ಸುಂದರವಾಗಿ ಕಟ್ಟಿಕೊಡಲು ಯತ್ನಿಸಿದ್ದಾಗಿ ಲೇಖಕರು ಹೇಳಿದ್ದಾರೆ.
©2024 Book Brahma Private Limited.