ವಿದ್ವಾಂಸ ಡಾ. ಶತಾವಧಾನಿ ಆರ್. ಗಣೇಶ ಅವರ ಕೃತಿ-ಸಂಸ್ಕಾರಗಳು. ಪರಮಾರ್ಥದಲ್ಲಿ ಹಾಗೂ ಪ್ರಸ್ತುತ ಸ್ಥಿತಿಗೆ ಅನ್ವಯವಾಗುವ ಹಾಗೆ ಸಂಸ್ಕಾರ ಕುರಿತ ಚಿಂತನೆಗಳನ್ನು ಚರ್ಚಿಸಿದ್ದು ಈ ಕೃತಿಯ ವೈಶಿಷ್ಟ್ಯ. ಯಾವುದೇ ಒಂದು ಪರಿಕಲ್ಪನೆಯ ‘ಇದು ಪರಮಾರ್ಥಕ್ಕೆ ಸೇರಿದ್ದು; ಇದು ಪ್ರಸ್ತುತ ಸಮಾಜಕ್ಕೆ ಅನ್ವಯಿಸಿದ್ದು’ ಎಂದೆಲ್ಲ ಮಾತನಾಡುತ್ತೇವೆ. ಆದರೆ, ಈ ರೀತಿಯ ತಿಳಿವಳಿಕೆ ನಮ್ಮ ಅಜ್ಞಾನದ ಸೂಚಕ. ಪ್ರಸ್ತುತ ಬದುಕಿನ ಆದರ್ಶ-ಮೌಲ್ಯಯುತವಾಗಿರುವುದು ಪರಮಾರ್ಥಕ್ಕೂ ಅನ್ವಯವಾಗುತ್ತವೆ. ಆದರೆ, ಇಲ್ಲಿ ಸಲ್ಲುವುದು ಅಲ್ಲಿಯೂ ಸಲ್ಲುತ್ತದೆ. ಆದರೆ, ಇಲ್ಲಿ ಸಲ್ಲದಿರುವುದು ಅಲ್ಲಿಯೂ ತಿರಸ್ಕಾರಕ್ಕೆ ಒಳಗಾಗುತ್ತದೆ. ಈ ಕುರಿತ ಆಳ ಚಿಂತನೆಗಳು ಓದುಗರ ಜ್ಞಾನ ವಿಸ್ತಾರವನ್ನು ಹೆಚ್ಚಿಸುತ್ತವೆ.
©2024 Book Brahma Private Limited.