‘ಸಾಹಿತ್ಯ ಭಾರತೀ’ ಕೃತಿಯು ಎನ್. ಅನಂತರಂಗಾಚಾರ್ ಅವರ ಗ್ರಂಥವಾಗಿದೆ. ಈ ಕೃತಿ ಭರತ ಖಂಡದ ಹತ್ತೊಂಬತ್ತು ಅಧಿಕೃತ ಭಾಷೆಗಳ ಸಾಹಿತ್ಯ ಚರಿತ್ರೆಯ ಜೊತೆಗೆ ಇಲ್ಲಿ ಭಾರತೀಯರಿಂದ ರಚಿತವಾಗುತ್ತಿರುವ ಇಂಗ್ಲೀಷ್ ಸಾಹಿತ್ಯದ ಚರಿತ್ರೆಯೂ ರೂಪುಗೊಂಡಿದೆ. ಅಲ್ಲದೇ ಭಾರತದ ವಿವಿಧ ಭಾಷೆಗಳ ಮಾದರಿ ಬರೆಹಗಳನ್ನೂ ನೀಡಿರುವುದು ಮತ್ತೊಂದು ವಿಶೇಷ. ಸಾಹಿತ್ಯ ಭಾರತೀ ಹೆಸರೇ ಹೇಳುವಂತೆ ಭಾರತದ ಸಾಹಿತ್ಯಕ ಸಂವೇದನೆಯನ್ನು ಕಾಲಾನುಕ್ರಮಣಿಕೆಯನ್ನು ದಾಖಲಿಸುವ ಕಾರ್ಯವಾಗಿವೆ. ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಿಗೆ ತೌಲನಿಕ ಅಧ್ಯಯನಕ್ಕೆ ಆಕರಗ್ರಂಥವಾಗಿ ಒದಗುವ ಒಂದು ಸಂಶೋಧನಾ ಗ್ರಂಥವಾಗಿಯೂ ಇದು ಅತ್ಯಂತ ಗಮನಾರ್ಹವಾದ ಕೃತಿಯಾಗಿದೆ.
©2024 Book Brahma Private Limited.