ರಂಗಭೂಮಿ ಮತ್ತು ಸೌಂದರ್ಯಪ್ರಜ್ಞೆ

Author : ಎಂ. ಎಚ್. ಕೃಷ್ಣಯ್ಯ

Pages 254

₹ 160.00




Year of Publication: 2009
Published by: ಇಳಾ ಪ್ರಕಾಶನ
Address: ರಾಘವ ನಗರ, ನ್ಯೂ ಟಿಂಬರ್‌ಯಾರ್‍ಡ್‌ ಲೇಔಟ್, ಬೆಂಗಳೂರು. 560026

Synopsys

ಸೌಂದರ್ಯ ಪ್ರಜ್ಞೆ ಎಂಬುದು ಇಂಗ್ಲಿಷಿನಲ್ಲಿ aesthetics ಎಂದು ಕರೆಯಲಾಗುವ ಸೌಂದರ್ಯಶಾಸ್ತ್ರದ ಭಾಗ. ಯಾವುದೇ ಕಲಾ ಪ್ರಕಾರದ ಅವಿಭಾಜ್ಯ ಅಂಗ. ವಾಸ್ತುಶಿಲ್ಪವೇ ಇರಲಿ, ಕಾದಂಬರಿಯೇ ಇರಲಿ, ನೃತ್ಯವೇ ಆಗಿರಲಿ ಅದು ಕಲಾತ್ಮಕವಾಗಿದೆಯೇ ಎಂಬುದನ್ನು ಅಳೆಯಲು ಸಾಧ್ಯವಾಗುವುದು ’ಸೌಂದರ್ಯ ಪ್ರಜ್ಞೆ’ಯಿಂದ. 

ಬಹುಶ್ರುತ ವಿದ್ವಾಂಸರಾದ ಪ್ರೊ. ಎಂ.ಎಚ್‌. ಕೃಷ್ಣಯ್ಯನವರು ಬರೆದ ’ರಂಗಭೂಮಿ ಮತ್ತು ಸೌಂದರ್ಯದ ಪ್ರಜ್ಞೆ’ ಪಾಶ್ಚಾತ್ಯರಲ್ಲಿ ಸೌಂದರ್ಯ ಜ್ಞಾನ, ಭಾರತೀಯ ನಾಟಕಗಳ ಸೌಂದರ್ಯ ಪ್ರಜ್ಞೆಯನ್ನು ವಿವರಿಸುತ್ತದೆ. ಸೌಂದರ್ಯ ಪ್ರಜ್ಞೆಯನ್ನು ಪರಿಚಯಿಸುತ್ತ ಸಾಗುವ ಕೃತಿ ಕಲೆ ಮತ್ತು ಸೌಂದರ್ಯ, ರೂಪಕ ಜಗತ್ತು, ಕಲಾನುಭವ, ಸಂಜ್ಙಾ ಶಾಸ್ತ್ರ ಮುಂತಾದ ಸಂಗತಿಗಳ ಬಗ್ಗೆ ಚರ್ಚಿಸುತ್ತದೆ. 

About the Author

ಎಂ. ಎಚ್. ಕೃಷ್ಣಯ್ಯ
(21 July 1937)

ಸಾಹಿತಿ, ವಿಮರ್ಶಕ ಪ್ರೊ. ಎಂ. ಎಚ್. ಕೃಷ್ಣಯ್ಯ ಅವರು (ಜನನ: 21-07-1937) ಮೈಸೂರಿನಲ್ಲಿ ಜನಿಸಿದರು. ತಂದೆ ಹುಚ್ಚಯ್ಯ, ತಾಯಿ ಕೆಂಪಮ್ಮ. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ. ಎ ಮತ್ತು ಎಂ. ಎ. ಪದವೀಧರರು.  ಬೆಂಗಳೂರು, ಕೋಲಾರ, ಮಂಗಳೂರು, ಮಾಗಡಿ ಮುಂತಾದೆಡೆ ಸರ್ಕಾರಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ. 1979-83ರಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ನಿರ್ದೇಶನಾಲಯದ ಯುವ ಕರ್ನಾಟಕ ಹಾಗೂ ಸ್ಫೋರ್ಟ್ಸ್ ಅರೆನಾ ಪತ್ರಿಕೆಗಳಿಗೆ ಇವರನ್ನು ಸರ್ಕಾರವು ಸಂಪಾದಕರೆಂದು ನಿಯೋಜಿಸಿತ್ತು. ಲಲಿತ ಕಲಾ ಅಕಾಡೆಮಿಯ `ಕರ್ನಾಟಕ ಕಲಾವಾರ್ತೆ '(1987-92) ಗೌರವ ಸಂಪಾದಕರು ಮತ್ತು ಕಲಾ ಪಂಥ ಮಾಲೆಯ ‘ಎಕ್ಸ್ ಪ್ರೆಷನಿಸಂ’ ಹಾಗೂ ‘ಇಂಪ್ರೆಷನಿಸಂ’ ಪುಸ್ತಕಗಳಿಗೆ ...

READ MORE

Related Books