‘ರಂಗ ವೃತ್ತಾಂತ’ ಕವಿ ಹೇಮಾ ಪಟ್ಟಣಶೆಟ್ಟಿ ಅವರು ರಂಗಭೂಮಿ ಹಾಗೂ ನಾಟಕಗಳಿಗೆ ಸಂಬಂಧಿಸಿದ ಲೇಖನಗಳ ಸಂಕಲನ. ಕತೆ, ವಿಮರ್ಶೆ, ಅನುವಾದ, ನಾಟಕ ಪ್ರಕಾರಗಳಲ್ಲಿ ಗಮನಾರ್ಹ ಕೃತಿಗಳನ್ನು ರಚಿಸಿರುವ ಹೇಮಾ ಅವರ ಮತ್ತೊಂದು ಆಸಕ್ತಿಯ ಕ್ಷೇತ್ರ ರಂಗಭೂಮಿ. ಧಾರವಾಡ ರಂಗಭೂಮಿಯ ಚರಿತ್ರೆ-ವರ್ತಮಾನದ ನಡತೆಗಳನ್ನು ದಾಖಲಿಸುವ ಲೇಖನಗಳ ಜೊತೆಯಲ್ಲಿಯೇ ಕಾವ್ಯ ಮತ್ತು ನಾಟಕದ ಸ್ವರೂಪ. ವೈಶಿಷ್ಟ್ಯ - ಭಿನ್ನತೆ- ಅನನ್ಯತೆಗಳನ್ನು ವ್ಯಾಖ್ಯಾನಿಸುವ ಮೀಮಾಂಸೆ ಮಾದರಿಯ ಬರಹಗಳು ಗಮನ ಸೆಳೆಯುತ್ತವೆ. ವೃತ್ತಿ ಮತ್ತು ಹವ್ಯಾಸಿ ರಂಗ ಕಲಾವಿದೆಯರ ಅಗೋಚರವಾದ ತೊಳಲಾಟ, ತಲ್ಲಣಗಳನ್ನು ಅನಾವರಣ ಗೊಳಿಸಿದ್ದಾರೆ. ಬೇಂದ್ರೆ ಕುವೆಂಪು, ಸರಸ್ವತಿಬಾಯಿ, ರಾಜವಾಡೆ ಅವರ ನಾಟಕಗಳ ವಿಶ್ಲೇಷಣಾತ್ಮಕ ವಿಮರ್ಶೆಯನ್ನೂ ಈ ಕೃತಿ ಒಳಗೊಂಡಿದೆ.
©2024 Book Brahma Private Limited.