‘ರಂಗ ಕೈರಳಿ’ ಕಿರಣ್ ಭಟ್ ಅವರ ಪ್ರವಾಸ ಕಥನ. ರಂಗ ಪ್ರವಾಸಕಥನ ಅಂತಲೂ ಗುರುತಿಸಬಹುದಾಗಿದೆ. ಏಕೆಂದರೆ ಇದು ರಂಗಭೂಮಿಗೆ ಸಂಬಂಧಿಸಿದ ಕಥನ. ಈ ಕೃತಿಗೆ ಲೇಖಕ ಜಿ.ಎನ್. ಮೋಹನ್ ಬೆನ್ನುಡಿ ಬರೆದು ‘ಕಿರಣ್ ಭಟ್ ನಮ್ಮ ಕೈಹಿಡಿದು ಕೇರಳಕ್ಕೆ ಕೊಂಡೊಯ್ಯುತ್ತಾರೆ. ಊರು ತೋರಿಸಲು ಅಲ್ಲ. ಇಡೀ ಜಗತ್ತು ಬೆಕ್ಕಸ ಬೆರಗಾಗುವಂತೆ ನಾಟಕ ಕಟ್ಟುವ ಕೇರಳದಲ್ಲಿ ತಾವು ಅನುಭವಿಸಿದ ರಂಗ ಸಂಭ್ರಮವನ್ನು ಪರಿಚಯಿಸಲು’ ಎನ್ನುತ್ತಾರೆ. ರಂಗಕರ್ಮಿ ಕಿರಣ್ ಭಟ್ ಲವಲವಿಕೆಯ ಪಾದರಸದಂತಹ ವ್ಯಕ್ತಿ. ಹಾಗಾಗೇ ಈ ಕೃತಿ ಕೇರಳದ ಪ್ರವಾಸಕಥನವೂ ಹೌದು, ರಂಗ ನಾಟಕಗಳ ಸುಗ್ಗಿಯೂ ಹೌದು.
©2024 Book Brahma Private Limited.