ರಾಮ ಸಾಂಗತ್ಯ

Author : ಇಂದಿರಾಜಾನಕಿ ಎಸ್ ಶರ್ಮ

Pages 296

₹ 300.00




Year of Publication: 2024
Published by: ದೇರಾಜೆ ಸೀತಾರಾಮಯ್ಯ ಸಂಸ್ಮರಣ ಸಮಿತಿ
Address: 'ಗೋಕುಲ', ಲಕ್ಷ್ಮೀನಗರ, ಬಿಜೈ, ಮಂಗಳೂರು.
Phone: 9845764657

Synopsys

`ರಾಮಸಾಂಗತ್ಯ’ ಕೃತಿಯು ಇಂದಿರಾಜಾನಕಿ ಎಸ್ ಶರ್ಮ ಅವರ ಸಾಂಗತ್ಯ ಲಯದ ರಾಮಾಯಣದ ಒಂದು ಕಥೆಯಾಗಿದೆ. ಕೃತಿ ಕುರಿತು ಅಜಕ್ಕಳ ಗಿರೀಶ ಭಟ್ ಅವರು ಹೀಗೆ ಹೇಳಿದ್ದಾರೆ; ಇಂದಿರಾಜಾನಕಿಯವರು ತಮ್ಮ ವಿಚಾರಗಳನ್ನಾಗಲೀ ಆಧುನಿಕ ಸಿದ್ಧಾಂತಗಳನ್ನಾಗಲೀ ತಮ್ಮ ರಾಮಾಯಣದ ಮೇಲೆ ಹೇರಲು ಹೋಗಿಲ್ಲ. ವಾಲ್ಮೀಕಿಗೆ ನಿಷ್ಠವಾಗಿಯೇ ಬಾಲಕಾಂಡದಿಂದ ತೊಡಗಿ ಯುದ್ಧಕಾಂಡದವರೆಗೆ ಅವರ ಕಾವ್ಯ ಸಾಗುತ್ತದೆ. ರಾಮಾಯಣ, ಮಹಾಭಾರತಗಳಂತಹ ಪುರಾಣಕಥೆಗಳನ್ನು ಹೊಸದಾಗಿ ನಿರೂಪಿಸುವವರು ದೊಡ್ಡ ಸವಾಲನ್ನು ಎದುರಿಸಬೇಕಾಗುತ್ತದೆ. ಇದ್ದುದನ್ನೇ ಹೇಳಲು ಆಗುವುದಿಲ್ಲ. ಹಾಗೆಂದು, ವಾಲ್ಮೀಕಿ, ವ್ಯಾಸರ ಆಶಯಕ್ಕೆ ಅಥವಾ ದರ್ಶನಕ್ಕೆ ವಿರುದ್ಧವಾದ ಹೊಸತನ್ನೂ ಹೇಳಲೂ ಆಗದು. ಹಾಗಿರುವಾಗ ಮಧ್ಯದ ಸರಿಯಾದ ದಾರಿಯೆಂದರೆ ವಾಲ್ಮೀಕಿ, ವ್ಯಾಸ ದರ್ಶನಗಳಿಗೆ ವಿರೋಧವಾಗದಂತೆ ಹೊಸ ರೀತಿಯಲ್ಲಿ ಹಳೆಯ ಕಥೆಯನ್ನು ಹೇಳುವುದು. ಇದಕ್ಕೆ ಕವಿಯ ದಾರ್ಶನಿಕ ಒಳನೋಟ, ಉಪಮೆ-ರೂಪಕಗಳನ್ನು ಸೃಷ್ಟಿಸುವ ಪ್ರತಿಭೆ ಇವೆಲ್ಲ ಅನುಕೂಲಕರವಾಗಿ ಒದಗಿ ಬರುತ್ತವೆ. ಹಿಂದೆಯೇ ಹೇಳಿದಂತೆ ಕುವೆಂಪು ಅವರ ‘ಶ್ರೀ ರಾಮಾಯಣದರ್ಶನಂ’ ಈ ದೃಷ್ಟಿಯಲ್ಲಿ ಬಹಳ ಯಶಸ್ವಿಯಾದ ಮಹಾಕೃತಿಯಾಗಿದೆ. 

About the Author

ಇಂದಿರಾಜಾನಕಿ ಎಸ್ ಶರ್ಮ

ಇಂದಿರಾಜಾನಕಿ ಎಸ್ ಶರ್ಮ ಅವರು ಲೇಖಕಿ, ತಾಳಮದ್ದಳೆ ಅರ್ಥಧಾರಿ, ದೇರಾಜೆ ಸೀತಾರಾಮಯ್ಯನವರ ಪುತ್ರಿ. ಸಂಸ್ಕೃತ ಹಾಗೂ ಪ್ರಾಕೃತಗಳ ಪ್ರಾಥಮಿಕ ಶಿಕ್ಷಣವನ್ನು ಪಡೆದಿರುವ ಅವರು ಕನ್ನಡ ಎಂ.ಎ ಪದವೀಧರರು. ಕೃತಿಗಳು: ರಾಮ ಸಾಂಗತ್ಯ, ಕಲ್ಲೊಳಗೆ ಕತೆ ಹುಟ್ಟಿ ...

READ MORE

Related Books