ವೇದೋಪನಿಷತ್ತುಗಳ ಬೃಹದಾರಣ್ಯದಲ್ಲ ಸಿಲುಕಿ ಮಂಡೂಕದಂತೆ, ಕುಪ್ಪಳಿಸುತ್ತಾ, ಅಪೌರುಷೇಯಗಳನ್ನು ಕೇನಾಪಿ ವಿಧಾನೇನ ಅರಿಯುವ ಉತ್ಕರ ಇಚ್ಛೆಯನ್ನು ಹೊಂದಿ, ಮಿತ್ರಸಂಹಿತೆಯಲ್ಲಿ ಸಮಾನಸ್ಕಂಧರನ್ನು ಪ್ರಶ್ನಿಸುತ್ತಾ, ಈಶಪ್ರಾಯರಾದ ಗುರುಗಳ ಬುದ್ಧಿಖಾನೆಯಲ್ಲಿ ವಾಸವಾಗಿರುವ ವಿಷಯಗಳನ್ನೂ ಕೆದಕುತ್ತಾ, ಅರಿವಿನ ಶ್ವೇತವನ್ನೇರಿ, ಅಜ್ಞಾನದ ಅಶ್ವೇತವನ್ನು ಮಣಿಸುವುದರ ಮೂಲಕ ಸಗುಣರಾಗಬಯಸುವವರಿಗೆ ಈ ಕೃತಿಯು ಸಹಾಯಕವಾಗಿದೆ. ಮೂರ್ತವಾದುದನ್ನು ಅರಿಯಲು ಸಹ ಹಲವಾರು ನಿಘಂಟುಗಳನ್ನೋ ಗೂಗಲಮ್ಮನನ್ನೋ ಮೊರೆಹೋಗಬೇಕಾದ ಸಂದರ್ಭದಲ್ಲಿ ಅಮೂರ್ತವನ್ನು ಅರಿಯಬೇಕಾದರೆ ಅದರ ಗಾಢ ಅಧ್ಯಯನವನ್ನು ಕೈಗೊಂಡಿರುವ, ಸಂಸ್ಕೃತಸಾಗರದಲ್ಲಿ ಸಲಲಿಯವಾಸಿಯಂತ ಸರಾಗವಾಗಿ ಈಜಬಲ್ಲ ಪಂಡಿತರೊಬ್ಬರು ಈ ವಿಷಯಗಳ ಮೇಲೆ ಬೆಳಕು ಚೆಲ್ಲುವ ಅವಶ್ಯಕತೆಯಿತ್ತು. ಆ ಅವಶ್ಯಕತೆಯು ಇಲ್ಲಿ ಪೂರೈಸಲ್ಪಟ್ಟಿದೆ.
©2024 Book Brahma Private Limited.