‘ಮಾವೋನ ಕೊನೆಯ ನರ್ತಕ’ ಚೀನಾದ ನೃತ್ಯಕಲಾವಿದ ‘ಲೀ ಕ್ವಿನ್ ಕಿಂಗ್’ ಆತ್ಮಕತೆಯನ್ನು ಜಯಶ್ರೀ ಭಟ್ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ. ಛಂದ ಪುಸ್ತಕ ಪ್ರಕಾಶನದಿಂದ 2012ರಲ್ಲಿ ಮೊದಲ ಮುದ್ರಣ ಕಂಡಿದ್ದು, 2021ರಲ್ಲಿ ಮರುಮುದ್ರಣಗೊಂಡಿದೆ. ಡಾ.ಸಿ.ಎನ್. ರಾಮಚಂದ್ರನ್ ಈ ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದು, ‘ಇದೊಂದು ತುಂಬಾ ಪ್ರಾಮಾಣಿಕವಾಗಿರುವ, ನಾಟಕೀಯವಾಗಿರುವ, ಸ್ವಾರಸ್ಯಕರವಾಗಿರುವ ಆತ್ಮಕಥನ’ ಎಂದಿದ್ದಾರೆ. ಜೊತೆಗೆ, ಇದನ್ನು ಓದುವಾಗ ಮತ್ತೆ ಮತ್ತೆ ಒಂದು ಕಡೆ ಕಾರಂತರ ‘ಮೊಗ ಪಡೆದ ಮನ’ ನೆನಪಿಗೆ ಬರುತ್ತಿದ್ದರೆ ಮತ್ತೊಂದು ಕಡೆ, ಶ್ರೇಷ್ಠ ಭಾರತೀಯ ನರ್ತಕರಾದ ಉದಯಶಂಕರ, ಮಾಯಾ ರಾವ್ ಮುಂತಾದವರ ಕಥೆಯಂತೆಯೇ ಕಾಣುತ್ತಿತ್ತು ಎಂದು ಅಭಿಪ್ರಾಯಪಡುತ್ತಾರೆ.
ಒಂದು ಬಡ ಸಮಾಜದಿಂದ ಪ್ರತಿಭಾಶಾಲಿ ಮತ್ತೊಂದು ಶ್ರೀಮಂತ ಸಮಾಜದಲ್ಲಿ ತನ್ನ ಕಲಾಸಿದ್ಧಿಯನ್ನು ಕಂಡುಕೊಳ್ಳುವುದು ಆಧುನಿಕ ಕಾಲದ ದುರದೃಷ್ಟಕರ ವ್ಯಂಗ್ಯ-ಟಾಗೋರರೂ ಸೇರಿದಂತೆ ಸರಿ ಸುಮಾರು ಎಲ್ಲಾ ಏಷ್ಯಾ-ಆಫ್ರಿಕಾ ದೇಶಗಳ ಕಲಾವಿದರೂ ಸಾಹಿತಿಗಳೂ ತಮ್ಮ ನಾಡಿಗಿಂತ ಹೆಚ್ಚಾಗಿ ಯೂರೋಪ್ ಅಮೇರಿಕಾ ದೇಶಗಳಿಗೆ ಹೆಚ್ಚು ಋಣಿಗಳಾಗಿದ್ದಾರೆ. (ಅಚಿಬೆಯೂ ಸೇರಿದಂತೆ) ಹಾಗೆಯೇ ಈ ಕಥನ ಕಲಾವಿದನ ಬಾಲ್ಯದಿಂದ ಪ್ರಾರಂಭವಾಗಿ ಅವನ ಕಲೆ ಪರಿಪೂರ್ಣವಾಗುವಲ್ಲಿಗೆ ಮುಗಿಯುತ್ತದೆ. ಎಲ್ಲ ಉತ್ತಮ ಕಲಾತ್ಮಕ ಕಾದಂಬರಿಗಳಂತೆ (kunstler roman, portrait of an artist, lust for life, cakes and ale, ಮೊಗ ಪಡೆದ ಮನ, ಹಂಸಗೀತೆ ಇತ್ಯಾದಿ) ಹಾಗೆಯೇ ಇನ್ನೊಂದು ನೆಲೆಯಲ್ಲಿ ಮಾರ್ಕ್ಸ್ ವಾದಿ ಚೀನಾದ ಕ್ರೌರ್ಯ ಹಾಗೂ ಬಂಡವಾಳಶಾಹಿ ಅಮೆರಿಕಾದ ಉದಾರವಾದ ಇವುಗಳಿಗೂ ಕನ್ನಡಿ ಹಿಡಿಯುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
©2024 Book Brahma Private Limited.