ಮಹರ್ಷಿ ಟಾಲಸ್ಟಾಯ್ ಆತ್ಮಕಥನ `ಎ ಕನ್ ಫೆಶನ್’ (ಗುಣದೋಷ ಕಥನ) ಪುಸ್ತಕವನ್ನು ಕವಿ ಮಧುರಚೆನ್ನ ಹಾಗೂ ಜನಪದ ಸಾಹಿತಿ ಸಿಂಪೀ ಲಿಂಗಣ್ಣ ಅನುವಾದಿಸಿದ ಕೃತಿ-ಬಾಳಿನಲ್ಲಿ ಬೆಳಕು. ಈ ಪುಸ್ತಕದ ಬೆಲೆ-ಹತ್ತಾಣೆ (00:60 ಪೈಸೆ)
ತನ್ನ ಜೀವನವು ಶುದ್ಧವಾಗುವವರೆಗೆ ಸತ್ಯದರ್ಶನ ವಾಗಲಾರದು ಎಂಬ ಸಂದೇಶವು ಈ ಕೃತಿ ಸಾರುತ್ತಿದ್ದರ ಹಿನ್ನೆಲೆಯಲ್ಲಿ ಕೃತಿಗೆ ‘ಬಾಳಿನಲ್ಲಿ ಬೆಳಕು’ ಎಂದು ಹೆಸರಿಸಲಾಯಿತು ಎಂದು ಅನುವಾದಕರು ಸ್ಪಷ್ಟಪಡಿಸಿದ್ದಾರೆ. ಜೀವನ ವೈಭೋಗದ ಸ್ಥಿತಿಯಿಂದ ವೈರಾಗ್ಯವರೆಗಿನ ಟಾಲಸ್ಟಾಯ್ ಅವರ ಜೀವನ ಪಯಣ ತಮ್ಮ ಮೇಲೆ ಪ್ರಭಾವ ಬೀರಿದ್ದರ ಕಾರಣ ಅವರ ಆತ್ಮಕಥನವನ್ನು ಅನುವಾದಿಸಲು ಪ್ರೇರಣೆ ಯಾಯಿತು ಎಂದು ಹೇಳಿರುವ ಅನುವಾದಕರು, ಆತನ ಜೀವನದ ಸಂಕ್ಷಿಪ್ತ ಚಿತ್ರಣ ನೀಡಿ ಕೃತಿಯನ್ನು ಅನುವಾದಿಸಿದ್ದಾರೆ.
©2025 Book Brahma Private Limited.