ಭಾರತ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಬಿ. ಗಜೇಂದ್ರ ಗಡ್ಕರ್ (ಪ್ರಹ್ಲಾದ್ ಬಾಳಾಚಾರ್ಯ ಗಜೇಂದ್ರ ಗಡ್ಕರ್, 16 ಮಾರ್ಚ್ 1901 ಮಹಾರಾಷ್ಟ್ರದ ಸಾತಾರದಲ್ಲಿ ಜನನ ಹಾಗೂ 12 ಜೂನ್ 1981 ರಂದು ಮುಂಬೈನಲ್ಲಿ ಮರಣ) ಅವರ ಇಂಗ್ಲಿಷಿನಲ್ಲಿರುವ ಆತ್ಮಕಥನವನ್ನು ಲೇಖಕ ಡಿ.ಕೆ. ಶ್ಯಾಮಸುಂದರ ರಾವ್ ಅವರು ‘ನನ್ನ ನೆನಪಿನಂಗಳದ ಛಾಪುಗಳು’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಕರ್ನಾಟಕದಲ್ಲಿಯ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದವರು. ಭಾರತದ ಸುಪ್ರೀಂಕೋರ್ಟ್ ನ 7ನೇ ( 1964ರ ಫೆಬ್ರವರಿಯಿಂದ 1966ರ ಮಾರ್ಚ್ ವರೆಗೆ ) .ಮುಖ್ಯ ನ್ಯಾಯಮೂರ್ತಿಗಳಾಗಿದ್ದರು. ‘ಓಪನ್ ಲೈಬ್ರರಿ’ಎಂಬ ಶೀರ್ಷಿಕೆಯಡಿ ಕೃತಿ ರಚಿಸಿದ್ದರು. 1972ರಲ್ಲಿ ಭಾರತ ಸರ್ಕಾರ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.
©2025 Book Brahma Private Limited.