ಮರಾಠಿಯ ಖ್ಯಾತ ಲೇಖಕಿ ಉಮಾ ಕುಲಕರ್ಣಿ ಅವರ ಆತ್ಮ ಕಥನ-ಸಂವಾದ, ಅನುವಾದ. ಈ ಕೃತಿಯನ್ನು ಲೇಖಕ ವಿರೂಪಾಕ್ಷ ಕುಲಕರ್ಣಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಉಮಾ ಕುಲಕರ್ಣಿ ಅವರು ಕನ್ನಡ ಹಾಗೂ ಮರಾಠಿ ಭಾಷೆಯ ಸಾಹಿತ್ಯವನ್ನು ಅನುವಾದದ ಮೂಲಕ ಎರಡೂ ಭಾಷೆಯಲ್ಲಿ ಕೃಷಿ ಕೈಗೊಂಡಿದ್ದಾರೆ. ಭೈರಪ್ಪನವರ ಸಾಹಿತ್ಯ: ಮರಾಠಿ ವಿಮರ್ಶೆ ಎಂಬ ಕೃತಿಯು ಕನ್ನಡಿಗ ಕಾದಂಬರಿಕಾರರೊಬ್ಬರ ಸಾಹಿತ್ಯವನ್ನು ಮರಾಠಿ ಭಾಷಿಗ ಸಾಹಿತಿಗಳು ಹೇಗೆ ಹಾಗೂ ಯಾವ ಅಂಶಗಳ ಹಿನ್ನೆಲೆಯಲ್ಲಿ ಸ್ವೀಕರಿಸಿದ್ದಾರೆ ಎಂಬುದರ ಒಳನೋಟ ನೀಡುವ ಈ ಕೃತಿಯು ಪ್ರಸಿದ್ಧವಾಗಿದೆ. ಎರಡು ಭಾಷೆಯ ಸಾಮರಸ್ಯ -ಇತಿಹಾಸ ಕಟ್ಟಿಕೊಡುವತ್ತಲೂ ಉಮಾ ಕುಲಕರ್ಣಿ ಅವರು ಶ್ರಮಿಸಿದ್ದಾರೆ. ಹೀಗಾಗಿ, ಕನ್ನಡಕ್ಕೆ ಬಂದ ಈ ಕೃತಿಯು ಭಾಷಾ ಸಾಮಸರ್‍ಯದ ದೃಷ್ಟಿಯಿಂದ ಬಹುಮುಖ್ಯವಾಗುತ್ತದೆ.
©2024 Book Brahma Private Limited.