ಸೋನಾಕಾಂಬಳೆ ಅವರು ಬರೆದ ಆತ್ಮಕಥೆಯನ್ನು ಚಂದ್ರಕಾಂತ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದು ಕೇವಲ ಆತ್ಮಕಥೆಯಲ್ಲ. ಸೋನಾ ಅವರ ಈ ಆತ್ಮಕತೆಯು ಅವರು ಅನುಭವಿಸಿದ ಕಷ್ಟ ನೋವುಗಳ ಜೊತೆಗೆ ಜಾತಿ ಹೆಸರಿನ ಕಾರಣಕ್ಕಾಗಿ ನಡೆಸಿಕೊಂಡ ರೀತಿ, ಅವಮಾನ, ಅನುಭವಿಸಿದ ಕಷ್ಟ ಕಾರ್ಪಣ್ಯಗಳನ್ನು ಹೊರಗೆಡವಿದೆ. ಇಡೀ ದಲಿತರ ಬದುಕನ್ನು ವಿವರಿಸುವ ಲೇಖಕರು ಕಾಲ ಬದಲಾದಂತೆ ದಲಿತರನ್ನು ಶೋಷಿಸುವ ರೀತಿ ಬದಲಾಗಿರುವುದು, ಜಾತಿ ಎಂಬ ಸಂಕೀರ್ಣ ಬಲೆ ಹೆಣೆದುಕೊಂಡಿರುವ ರೀತಿಯನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.
©2025 Book Brahma Private Limited.