ಖ್ಯಾತ ಪತ್ರಕರ್ತ, ಚಿಂತಕ ಹಾಗೂ ರಾjಕೀಯ ವಿಶ್ಲೇಷಕ ಕುಲದೀಪ ನಯ್ಯರ್ ಅವರ ಆತ್ಮಕಥೆ ಮೂಲ ಇಂಗ್ಲಿಷ್ ನಲ್ಲಿದ್ದು, ಅದನ್ನು ಆರ್. ಪೂರ್ಣಿಮಾ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. 1992ರಲ್ಲಿ ರಾಜ್ಯಸಭೆ ಸದಸ್ಯರಾಗಿ ನೇಮಕಗೊಂಡಿದ್ದರು. ಎಡಪಂಥೀಯ ವಿಚಾರಧಾರೆಯ ಕುಲದೀಪ ನಯ್ಯರ್ ಉರ್ದು ಪತ್ರಿಕೆಯ ವರದಿಗಾರರಾಗಿ ಪ್ರತಿಕಾ ಕ್ಷೇತ್ರ ಪ್ರವೇಶಿಸಿದರು. ದೇಶದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೈಲು ವಾಸ ಅನುಭವಿಸಿದರು. ಸಂಯುಕ್ತ ರಾಷ್ಟ್ರ ಸಂಸ್ಥೆಯಲ್ಲಿ ಭಾರತದ ನಿಯೋಗದ ಸದಸ್ಯರಾಗಿದ್ದರು. ಖ್ಯಾತ ಅಂಕಣಕಾರರು ಆಗಿದ್ದರು. 2000 ರಿಂದ ಪ್ರತಿವರ್ಷ ಅವರು ಪಾಕಿಸ್ತಾನ ಮತ್ತು ಭಾರತಗಳ ಸ್ವಾತಂತ್ರ್ಯದಿನಗಳಂದು (14 ಮತ್ತು 15 ಆಗಸ್ಟ್) ಅಮೃತಸರ ಸಮೀಪದ ವಾಘಾ ಗಡಿಯಲ್ಲಿ ಮೊಂಬತ್ತಿ ಬೆಳಗಿಸುವ ಕೆಲಸಕ್ಕೆ ಶಾಂತಿವಾದಿ ಕಾರ್ಯಕರ್ತರ ನೇತೃತ್ವ ವಹಿಸುತ್ತಿದ್ದರು. 23ಆಗಸ್ಟ್ 2018ರಂದು ದೆಹಲಿಯ ತಮ್ಮ ಮನೆಯಲ್ಲಿ (95 ವಯಸ್ಸು) ನಿಧನರಾದರು.
ಕೃತಿಯ ಶ್ರೇಷ್ಠ ಅನುವಾದಕ್ಕಾಗಿ ಕರ್ನಾಟಕ ಲೇಖಕಿಯರ ಸಂಘದ ‘ಎಚ್.ವಿ.ಸಾವಿತ್ರಮ್ಮ ಪ್ರಶಸ್ತಿ’( 2013), ಶ್ರೇಷ್ಠ ಅನುವಾದಕ್ಕಾಗಿ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಪ್ರಶಸ್ತಿ -2013 ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ (2015) ಲಭಿಸಿವೆ.
©2025 Book Brahma Private Limited.