S/o ಹಮಾಸ್

Author : ಅಜಿತ್ ಹನುಮಕ್ಕನವರ್

Pages 318

₹ 199.00




Year of Publication: 2017
Published by: ಜೈಕೊ ಪಬ್ಲಿಷಿಂಗ್ ಹೌಸ್,
Address: ಆರ್.ಕೆ. ಪುರಂ, ಬೆಂಗಳೂರು

Synopsys

ಭಯೋತ್ಪಾದಕ ಮೊಸಾಬ್ ಹಸನ್ ಯೂಸೂಫ್ ಅವರ ಆತ್ಮಕಥೆ ‘ಸನ್ ಆಫ್ ಹಮಾಸ್’ ಎಂಬ ಇಂಗ್ಲಿಷ್ ಕೃತಿಯನ್ನು ಲೇಖಕ -ಪತ್ರಕರ್ತ ಅಜಿತ್ ಹನುಮಕ್ಕನವರ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಹಮಾಸ್ ಎಂಬುದು ಉಗ್ರಗಾಮಿ ಸಂಘಟನೆ. ಅದರ ಸಂಸ್ಥಾಪಕ ಸದಸ್ಯ ಯೂಸೂಫ್ ಹಸನ್. ಈತನ ಮಗನೇ ಮೊಸಾಬ್ ಹಸನ್. iಇಸ್ರೇಲಿನ ಒಬ್ಬ ಯಹೂದಿಯನ್ನು ಕೊಲ್ಲುವ ಮೂಲಕ ಜನ್ನತ್ ( ಸ್ವರ್ಗ)  ಪಡೆಯಲು ಹಂಬಲಿಸಿ, ಒಂದು ಬಂದೂಕು ಪಡೆದಾಗ ಈತನ ವಯಸ್ಸು ಬರೀ -18. ಹೀಗೆ ಭಯೋತ್ಪಾದನೆ ಸಂಘಟನೆಯಲ್ಲಿ ಸಕ್ರಿಯವಾದ ಮೊಸಾಬ್,  ಇಸ್ರೇಲಿ ಬೇಹುಗಾರಿಕಾ ಪಡೆಯಲ್ಲೂ ಏಜೆಂಟ್ ಆಗಿ ಕೆಲಸ ಮಾಡಿದ್ದ. ನಂತರ ಆತ ಅಮೆರಿಕಕ್ಕೆ ಶರಣಾದ. ಆದರೆ, ಆಲ್ ಖೈದಾ ಭಯೋತ್ಪಾದನಾ ಸಂಘಟನೆಯು ಈತನ ಹತ್ಯೆಗೆ ಫತ್ವಾ ಹೊರಡಿಸಿತ್ತು. ಇಂತಹ ಸಂಗತಿಗಳನ್ನು ಒಳಗೊಂಡ ಕೃತಿ ಇದು.

About the Author

ಅಜಿತ್ ಹನುಮಕ್ಕನವರ್

ಲೇಖಕ ಅಜಿತ್ ಹನುಮಕ್ಕನವರ್ ಅವರು ಧಾರವಾಡದ ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಣ ಪೂರ್ಣಗೊಳಿಸಿ ನಂತರ ಮನೋವಿಜ್ಞಾನದಲ್ಲಿ ಪದವಿಪೂರೈಸಿದ್ದಾರೆ.  ಪ್ರಸ್ತುತ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ಸುದ್ದಿ ವಿಭಾಗದ ಸಂಪಾದಕರಾಗಿ ಕಾರ್ಯನಿರ್ವಹಿಸುತಿದ್ದಾರೆ.  ಕೃತಿಗಳು: S/o ಹಮಾಸ್ : ಇದು ನನ್ನ ಆತ್ಮಕಥೆ...(ಅನುವಾದ) ...

READ MORE

Related Books