ನಾನು ಆಮಿರ್ ಖಾನ್ ಭಯೋತ್ಪಾದಕನಲ್ಲ

Author : ನೂರ್ ಅಹಮದ್ ಎ.ಎಸ್

Pages 220

₹ 150.00




Year of Publication: 2018
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

'ಮೈ ನೇಮ್‌ ಇಸ್‌ ಖಾನ್‌’ ಬಟ್‌ ಐ ಆಮ್‌ ನಾಟ್‌ ಟೆರರಿಸ್ಟ್‌ ಎಂಬ ಚಿತ್ರ ಬಿಡುಗಡೆಗೆ ಮುನ್ನವೇ ವಿವಾದಕ್ಕೆ ಕಾರಣವಾಗಿತ್ತು. ಈ ಪುಸ್ತಕದ ಶೀರ್ಷಿಕೆಯೂ ಬಹುತೇಕ ಅದೇ ತರಹ ಇದೆ. ಆದರೆ, ಇದು ಸಿನಿಮಾ ಕತೆಯಲ್ಲ. ವ್ಯಕ್ತಿಯೊಬ್ಬನ ದಾರುಣ ವ್ಯಥೆ. ವಿನಾಕಾರಣ ವರ್ಷಾನುಗಟ್ಟಲೆ  ಸೆರೆಯಲ್ಲಿದ್ದು ನರಳಿದ ಅಮೀರ್‌ಖಾನ್‌ ಎಂಬ ಭಾರತೀಯನ ದಯನೀಯ ಸ್ಥಿತಿ. ವ್ಯವಸ್ಥೆಯ ಶಿಕಾರಿಗೆ ಬಲಿಯಾದ ವ್ಯಕ್ತಿ ಮೊಹಮ್ಮದ್‌ ಅಮೀರ್‌ಖಾನ್‌ ಹಕ್ಸರ್‌. ಅಮೀರ್‌ ನಿರಪರಾಧಿ ಎಂದು ಸಾಬೀತಾಗಲು ಹದಿನಾಲ್ಕು ವರ್ಷ ಬೇಕಾಯಿತು. ಅಷ್ಟೂ ದಿನ ಮಾಡದ ತಪ್ಪಗೆ ಪ್ರಭುತ್ವ ವಿಧಿಸಿದ ’ಶಿಕ್ಷೆ’ ಅನುಭವಿಸಬೇಕಾಯಿತು. ಕೊನೆಗೆ ’ಭಯೋತ್ಪಾದಕನಲ್ಲ’ ಎಂಬ ಸಂಗತಿ ಸಾಬೀತಾಗಿ ಸೆರೆಯಿಂದ ಹೊರ ಬಂದಾಗ ಕಟ್ಟಿಕೊಳ್ಳಲು ಬದುಕೇ ಉಳಿದಿರಲಿಲ್ಲ. ಅಮೀರ್‌ಖಾನ್‌ ಅನುಭವ ಕಥನ ಓದುತ್ತಿದ್ದರೆ ಕ್ರೌರ್ಯದ ಎದುರು ಸೆಣೆಸಿದ ಅಸಹಾಯಕ ಕ್ಷಣಗಳ ಬಗ್ಗೆ ವಿಷಾದ ಹುಟ್ಟದೇ ಇರದು. 

 

About the Author

ನೂರ್ ಅಹಮದ್ ಎ.ಎಸ್
(18 May 1973)

ಮೂಲತಃ ಶಿವಮೊಗ್ಗದವರಾದ ನೂರ್ ಅಹಮದ್ ಎ.ಎಸ್,  1973 ರ ಮೇ 18ರಂದು ಜನಿಸಿದರು. ಶಿವಮೊಗ್ಗದಲ್ಲಿಯೇ ತಮ್ಮ ವಿದ್ಯಾಭ್ಯಾಸ ಮುಗಿಸಿ ಪ್ರಸ್ತುತ ಬೆಂಗಳೂರಿನ ಕಾಲೇಜ್ ಒಂದರಲ್ಲಿ ಆಂಗ್ಲ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಲಂಕೇಶ್ ಪತ್ರಿಕೆ, ಗೌರಿ ಲಂಕೇಶ್, ವಾರ್ತಾಭಾರತಿಯಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ. ಮಂಗ್ಳೂರು ವಿಜಯ ಅವರ ಜೊತೆಗೂಡಿ ಮುಸ್ಲಿಂದನಿ ಮಾಸಿಕದಲ್ಲಿ ಕೆಲಸ ಮಾಡುತ್ತಾ ‘ಬರ್ಮಾ ಬಿಕ್ಕಟ್ಟು’ ಮತ್ತು ‘ನಾನು ಅಮಿರ್ ಖಾನ್’ ಭಯೋತ್ಪಾದಕನಲ್ಲ ಎಂಬ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕೆಲಕಾಲ ದೂರದರ್ಶನಕ್ಕಾಗಿ ದುಡಿದಿದ್ದಾರೆ. ಫೋಟೋಗ್ರಾಫಿ ಯನ್ನು ಹವ್ಯಾಸ ಮಾಡಿಕೊಂಡಿದ್ದು, ಖಾಸಗಿ ಪತ್ರಿಕೆಯೊಂದರಲ್ಲಿ ಅಂಕಣಕಾರರಾಗಿಯೂ ಗುರುತಿಸಿಕೊಂಡಿದ್ದಾರೆ. ...

READ MORE

Related Books