ಆಫ್ರಿಕಾ ಖಂಡದ ಮಾಲಾವಿ ದೇಶದಲ್ಲಿ ಜನಿಸಿದ ವಿಲಿಯಂ ಕಾಂಕ್ವಾಂಬಾ ಬಡತನ, ಹಸಿವು, ಕ್ಷಾಮ ಇವುಗಳಿಂದ ಶಿಕ್ಷಣ ವಂಚಿತನಾದನು. ತನ್ನ ಕಷ್ಟದ ದಿನಗಳಲ್ಲೂ ಎದೆಗುಂದದೆ ಗ್ರಂಥಾಲಯ ಪುಸ್ತಕಗಳನ್ನು ಓದುತ್ತಾ ಸ್ಫೂರ್ತಿಗೊಂಡು ಜನರು ಬಿಸಾಡಿದ ಹಳೆಯ ವಸ್ತುಗಳಿಂದಲೇ ಗಾಳಿಯಂತ್ರವನ್ನು ತಯಾರಿಸಿ ಅಂತರಾಷ್ಟ್ರೀಯ ಮಟ್ಟದ ಖ್ಯಾತಿ ಪಡೆದನು.
ಇವನನ್ನು ಕುರಿತಾದ ಆತ್ಮಕತೆಯೊಂದನ್ನು ಬ್ರಿಯಾನ್ ಮೀಲರ್ ರಚಿಸಿ ಸಾಹಿತ್ಯ ಜಗತ್ತಿಗೆ ಆತನ ಬದುಕು, ಸಾಧನೆಯನ್ನು ಪರಿಚಯಿಸಿದ. ವಿಲಿಯಂ ಚೆಚಿವಾ ಭಾಷೆಯಲ್ಲಿ ತನ್ನ ಕತೆ ಹೇಳುತ್ತಿದ್ದರೆ ಅದನ್ನು ಇಂಗ್ಲಿಷ್ ನಲ್ಲಿ ಭಾಷಾಂತರಿಸಿ, ಆತನ ಬಗ್ಗೆ ಬ್ರಿಯಾನ್ ಕೃತಿ ರಚನೆ ಮಾಡಿದ್ದಾನೆ. ಇದನ್ನು ಲೇಖಕಿ ಕರುಣಾ ಬಿ ಎಸ್ ಕನ್ನಡಕ್ಕೆ ’ಗಾಳಿ ಪಳಗಿಸಿದ ಬಾಲಕ’ ಎಂಬ ಶೀರ್ಷಿಕೆಯಡಿ ತಂದಿದ್ದಾರೆ.
©2025 Book Brahma Private Limited.